ಆಯುಷ್ಮಾನ್ ಭವ ಚಿತ್ರದಲ್ಲಿ ರಚಿತಾ ರಾಮ್ ಅವರ ಅಭಿನಯಕ್ಕೆ ಎಲ್ಲೆಡೆಯಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ. ಮೊದಲಿಗೆ ಶಿವರಾಜ್ ಕುಮಾರ್ ಮೆಚ್ಚುಗೆ ಸ್ವೀಕರಿಸಿದ್ದ ರಚಿತಾಗೆ ಪ್ರಿಯಾಂಕಾ ಉಪೇಂದ್ರ ಕೂಡಾ ಬೆನ್ನುತಟ್ಟಿದ್ದರು. ಈಗ ದಕ್ಷಿಣ ಭಾರತದ ಖ್ಯಾತ ತಾರೆ ಸುಹಾಸಿನಿ ಸರದಿ.
ರಚಿತಾ ರಾಮ್ ಅಭಿನಯ ನೋಡಿ ಮೆಚ್ಚಿರುವ ಸುಹಾಸಿನಿ, ನೀನು ತಮಿಳಿನಲ್ಲೂ ಆಕ್ಟ್ ಮಾಡಬೇಕು ಎಂದು ಆಹ್ವಾನಿಸಿದ್ದಾರೆ. ಈಗಲೇ ನಿನಗೆ ಎಷ್ಟೆಷ್ಟು ಒಳ್ಳೊಳ್ಳೆ ಪಾತ್ರ ಸಿಗುತ್ತಿವೆ ಎಂದು ಖುಷಿಗೊಂಡಿದ್ದರAತೆ ಸುಹಾಸಿನಿ. ರಚಿತಾ ರಾಮ್‌ಗೆ ಈಗ ಸ್ವರ್ಗಕ್ಕೆ ಮೂರೇ ಗೇಣು.