` ಕಾಳಿ ಅವತಾರ ನೋಡಿದ್ರೆ, ಮೇಘನಾರನ್ನ ಯಾರೂ ಮದುವೆಯಾಗಲ್ವಂತೆ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
kaalidasa kananda mestru
Kaalidasa Kannada Mestru Movie Image

ಬಜಾರಿ.. ಗಠವಾಣಿ.. ಆಕೆಯ ಅಬ್ಬರದ ಎದುರು ಗಂಡ ವಿಲವಿಲನೆ ಒದ್ದಾಡುತ್ತಾನೆ. ಬಜಾರಿ ಹೆಂಡತಿಯ ಕಾಳಿಯ ಎದುರು ಆತ ದಾಸ. ಇದು ಕಾಳಿದಾಸ ಕನ್ನಡ ಮೇಷ್ಟುç ಕಥೆ. ಇದುವರೆಗೆ ಸಾಫ್ಟ್ & ಸ್ವೀಟ್ ಪಾತ್ರ ಮಾಡುತ್ತಿದ್ದ ಮೇಘನಾ ಗಾಂವ್ಕರ್, ಇಲ್ಲಿ ಬಜಾರಿ. ಇಂಗ್ಲಿಷ್ ವ್ಯಾಮೋಹಿ. ಜಗ್ಗೇಶ್ ಇವರಿಗೆ ತದ್ವಿರುದ್ಧ. ಸಾಧುಪ್ರಾಣಿ.. ಕನ್ನಡ ಪ್ರೇಮಿ.

ಈ ಚಿತ್ರದಲ್ಲಿ ಮೇಘನಾ ಅವತಾರ ನೋಡಿದರ‍್ಯಾರೂ ಆಕೆಯನ್ನು ಮದುವೆಯಾಗಲ್ಲ. ಅಷ್ಟರಮಟ್ಟಿಗೆ ಭಯ ಹುಟ್ಟಿಸುತ್ತಾರೆ ಎನ್ನುವ ಸರ್ಟಿಫಿಕೇಟು ಕೊಟ್ಟಿರೋದು ಸಂಗೀತ ನಿರ್ದೇಶಕ ಗುರುಕಿರಣ್.

ಕನ್ನಡ ಮತ್ತು ಇಂಗ್ಲಿಷ್ ಶಿಕ್ಷಣದ ಕಥೆಯನ್ನು ಎಲ್ಲಿಯೂ ಬೋರ್ ಹೊಡೆಯದ ರೀತಿಯಲ್ಲಿ ಮನರಂಜನಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ ಕವಿರಾಜ್. ನಿರ್ಮಾಪಕ ಉದಯ್ ಕುಮಾರ್, ಕಥೆ ಮತ್ತು ದೃಶ್ಯ ಕೇಳುವ ಪ್ರತಿಯೊಂದನ್ನೂ ಒದಗಿಸಿಕೊಟ್ಟಿದ್ದಾರೆ.

ಇದು ಕೇವಲ ಸಿನಿಮಾ ಅಲ್ಲ. ನಗು ನಗುತ್ತಾ ಸಿನಿಮಾ ನೋಡುವ ಜನ, ಮನೆಗೆ ಹೋದ ಮೇಲೂ ಚಿತ್ರದ ಬಗ್ಗೆ ಯೋಚಿಸುತ್ತಾರೆ. ಹೀಗಾಗಿಯೇ ಈ ಸಿನಿಮಾ ಮಾಡಿದೆ ಎನ್ನುತ್ತಾರೆ ಉದಯ್ ಕುಮಾರ್. ಚಿತ್ರ ಇದೇ ವಾರ ರಿಲೀಸ್.

India Vs England Pressmeet Gallery

Odeya Audio Launch Gallery