` ಟಗರು ೨ಗೆ ಶಿವಣ್ಣನೇ ಪ್ರೊಡ್ಯೂಸರ್.. ಸೂರಿನೇ ಡೈರೆಕ್ಟರ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
tagaru 2 with soori soon
Shivarajkumar

ಆಯುಷ್ಮಾನ್ ಭವ ಚಿತ್ರದ ಯಶಸ್ಸಿನಲ್ಲಿರೋ ಶಿವರಾಜ್ ಕುಮಾರ್, ಟಗರು ೨ ಸಿನಿಮಾದತ್ತ ಮನಸ್ಸು ಮಾಡಿದ್ದಾರೆ. ಟಗರು ಶಿವಣ್ಣ ವೃತ್ತಿ ಬದುಕಿನಲ್ಲಿ ಬೇರೆಯದ್ದೇ ಸ್ಟೆöÊಲಿನ ಸಿನಿಮಾ. ಈಗ ಆ ಚಿತ್ರದ ಸೀಕ್ವೆಲ್ ಮಾಡಲು ಶಿವಣ್ಣ ಮನಸ್ಸು ಮಾಡಿದ್ದಾರೆ. ಶಿವಣ್ಣನೇ ಪ್ರೊಡ್ಯೂಸರ್.

ಟಗರು ಚಿತ್ರದ ಕ್ಲೆöÊಮಾಕ್ಸ್ನಲ್ಲಿಯೇ ಸೀಕ್ವೆಲ್ ಸುಳಿವು ಕೊಟ್ಟಿದ್ದರು ಸೂರಿ. ಈಗ ಸೂರಿಯೂ ಹ್ಯಾಪಿ. ಏಕೆಂದರೆ ಟಗರು ೨ ಆದರೆ, ಅದಕ್ಕೆ ಸೂರಿಯೇ ನಿರ್ದೇಶಕರಾಗಬೇಕು. ಮುಂದಿನ ದಿನಗಳಲ್ಲಿ ಈ ಬಗ್ಗೆ ಮಾತನಾಡುತ್ತೇನೆ ಎಂದಿದ್ದಾರೆ ಶಿವಣ್ಣ.

ಟಗರುನಂತಹ ಸಿನಿಮಾ ಮಾಡೋಕೆ ಸಿದ್ಧತೆಗಳು ಬೇಕು. ಕಥೆ, ಚಿತ್ರಕಥೆ ಸಿದ್ಧವಾಗಬೇಕು. ಸಮಯ ಬೇಕು ಎಂದಿರುವ ಸೂರಿ, ಶಿವಣ್ಣನನ್ನು ಇಟ್ಟುಕೊಂಡು ಕಮರ್ಷಿಯಲ್ ಪ್ರಯೋಗ ಮಾಡಬಹುದು ಎನ್ನುತ್ತಾರೆ. ಸದ್ಯಕ್ಕಿಲ್ಲದೇ ಹೋದರೂ, ಮುಂದಿನ ದಿನಗಳಲ್ಲಿ ಟಗರು ೨ ಬರೋದು ಫಿಕ್ಸ್.