ಕನ್ನಡದಲ್ಲಿ ಚಿರು ಮೂಲಕ ಪರಿಚಿತರಾದ ಕೃತಿ ಕರಬಂಧ, ಪ್ರೇಮ್ ಅಡ್ಡ, ಗೂಗ್ಲಿ, ಸೂಪರ್ ರಂಗಾ, ಬೆಳ್ಳಿ, ಮಾಸ್ತಿಗುಡಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಗೂಗ್ಲಿ, ಕೃತಿ ವೃತ್ತಿ ಬದುಕಿನ ಸೂಪರ್ ಹಿಟ್ ಸಿನಿಮಾ. ಹಿಂದಿಯಲ್ಲೂ ಸಕ್ಸಸ್ ಕಂಡಿರುವ ಕೃತಿ ಈಗ ಪ್ರೀತಿಯ ಬಲೆಯಲ್ಲಿ ಬಿದ್ದಿದ್ದಾರೆ.
ಸಹನಟ ಪುಲ್ಕಿತ್ ಜೊತೆ ಡೇಟಿಂಗ್‌ನಲ್ಲಿದ್ದಾರೆ ಕೃತಿ ಕರಬಂಧ. ಅದೂ ಸುಮಾರು ೫ ತಿಂಗಳಿAದ. ಈ ವಿಷಯವನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದಾರೆ. ಕಾರಣ, ಪುಲ್ಕಿತ್ ಮತ್ತು ಕೃತಿ ಬಗ್ಗೆ ಕೇಳಿಬಂದ ಗಾಸಿಪ್‌ಗಳು. ಅವುಗಳಿಗೆಲ್ಲ ಉತ್ತರ ಕೊಟ್ಟಿರೋ ಕೃತಿ, ಡೇಟಿಂಗ್‌ನಲ್ಲಿದ್ದೇವೆ, ಖುಷಿಯಾಗಿದ್ದೇವೆ ಎಂದಿದ್ದಾರೆ.