Print 
rakshith shetty avane srimanarayana,

User Rating: 5 / 5

Star activeStar activeStar activeStar activeStar active
 
avane srimanarayana promotions at comic con fest
Avane Srimanarayana Promotions

ಅವನೇ ಶ್ರೀಮನ್ನಾರಾಯಣ ರಿಲೀಸ್ ಆಗೋಕೆ ರೆಡಿಯಾಗಿದ್ದು, ಪ್ರಚಾರವೂ ವಿಭಿನ್ನವಾಗಿ ನಡೆಯುತ್ತಿದೆ. ಇದುವರೆಗೆ ಕನ್ನಡದಲ್ಲಿ ಯಾವುದೇ ಚಿತ್ರವೂ ಮಾಡಿರದ ರೀತಿಯಲ್ಲಿ ಪ್ರಚಾರಕ್ಕೆ ಮುಂದಾಗಿದೆ ಅವನೇ ಶ್ರೀಮನ್ನಾರಾಯಣ ಚಿತ್ರತಂಡ. ಬೆಂಗಳೂರಿನಲ್ಲಿ ನಡೆದ ಕಾಮಿಕ್ ಕಾನ್ ಇಂಡಿಯಾ ಫೆಸ್ಟಿವಲ್ ಗೊತ್ತಿದೆಯಲ್ಲ, ಆ ಹಬ್ಬದಲ್ಲಿ ಅವನೇ ಶ್ರೀಮನ್ನಾರಾಯಣ ಪಾತ್ರಧಾರಿಗಳು ಕಾಣಿಸಿಕೊಂಡಿದ್ದಾರೆ.

ದೇಶವಿದೇಶಗಳ ಕಾಮಿಕ್ ಪುಸ್ತಕ, ಗೇಮ್ಸ್, ವಿಡಿಯೋ, ಸಿನಿಮಾಗಳ ಪಾತ್ರಧಾರಿಗಳು ಈ ಹಬ್ಬದಲ್ಲಿ ಭಾಗವಹಿಸುತ್ತಾರೆ. ಅದದೇ ಪಾತ್ರಗಳ ವೇಷ ಹಾಕಿಕೊಂಡು ಪಾಲ್ಗೊಳ್ಳುತ್ತಾರೆ. ೨೦೧೧ರಲ್ಲಿ ದೆಹಲಿಯಲ್ಲಿ ಶುರುವಾದ ಈ ಹಬ್ಬ ಈ ಬಾರಿ ಬೆಂಗಳೂರಿನಲ್ಲಿತ್ತು. ನವೆಂಬರ್ ೧೬ ಮತ್ತು ೧೭ರಂದು ನಡೆದ ಈ ಹಬ್ಬದಲ್ಲಿ ಅವನೇ ಶ್ರೀಮನ್ನಾರಾಯಣ ಚಿತ್ರದ ವೇಷಧಾರಿಗಳು ಪಾಲ್ಗೊಂಡಿದ್ದಾರೆ. ಕನ್ನಡ ಚಿತ್ರದ ವೇಷಧಾರಿಗಳು ಇಂತಹ ಹಬ್ಬದಲ್ಲಿ ಪಾಲ್ಗೊಂಡಿರುವುದು ಇದೇ ಮೊದಲು.

ಅವನೇ ಶ್ರೀಮನ್ನಾರಾಯಣ ಪ್ರಮೋಷನ್ ವಿಭಿನ್ನವಾಗಿರಬೇಕು ಎನ್ನುವುದು ನಮ್ಮ ಉದ್ದೇಶ. ನಮ್ಮ ಹೀರೋ ಕ್ಯಾರೆಕ್ಟರ್ ಕೂಡಾ ಸೂಪರ್ ಹೀರೋ ರೀತಿಯಲ್ಲಿದೆ. ಅವನು ಬುದ್ದಿವಂತ ಮತ್ತು ಪವರ್‌ಫುಲ್. ಈ ಗೆಟಪ್‌ನಲ್ಲಿ ನಾವು ಆಯ್ಕೆ ಮಾಡಿದ ಕಲಾವಿದರು ಇಲ್ಲಿ ಪಾಲ್ಗೊಂಡರು, ಡೈಲಾಗ್ ಕೂಡಾ ಹೇಳಿದರು ಎಂದಿದ್ದಾರೆ ಪುಷ್ಕರ್ ಮಲ್ಲಿಕಾರ್ಜುನಯ್ಯ. ರಕ್ಷಿತ್ ಶೆಟ್ಟಿ, ಶಾನ್ವಿ ಶ್ರೀವಾತ್ಸವ್ ಅಭಿನಯದ, ಸಚಿನ್ ರವಿ ನಿರ್ದೇಶನದ ಅವನೇ ಶ್ರೀಮನ್ನಾರಾಯಣ ಡಿಸೆಂಬರ್ ಕೊನೆ ವಾರದಲ್ಲಿ ತೆರೆ ಕಾಣುತ್ತಿದೆ.