ಯಶ್ ಅವರ ಹುಟ್ಟುಹಬ್ಬ ಇನ್ನೂ ದೂರವಿದೆ. ಆಗಲೇ ಸಿದ್ಧತೆಗಳು ಶುರುವಾಗಿಬಿಟ್ಟಿವೆ. ಜನವರಿ ೮ರಂದು ಇರೋ ಹುಟ್ಟುಹಬ್ಬಕ್ಕೆ 50 ದಿನ ಮೊದಲೇ ಅಭಿಯಾನ ಶುರು ಮಾಡಿದ್ದಾರೆ ಯಶ್ ಫ್ಯಾನ್ಸ್. ಈ ಅಭಿಯಾನದ ಉದ್ದೇಶ ಹಸಿರು.
ಈ ಅಭಿಯಾನದಲ್ಲಿ ಹಸಿರು ಉಳಿಸಿ ಎಂಬ ಸಂದೇಶ ಸಾರುವುದರ ಜೊತೆಗೆ ಗಿಡಗಳನ್ನು ನೆಡುವ ಅಭಿಯಾನವನ್ನೂ ಶುರು ಮಾಡಿದ್ದಾರೆ. ಯಶ್ ಅಭಿಮಾನಿಗಳು ಆರಂಭಿಸಿರುವ ಈ ಅಭಿಯಾನಕ್ಕೆ ಕೈ ಜೋಡಿಸಿರುವುದು ಮಾಸ್ಟರ್ ಪೀಸ್ನ ನಾಗವಲ್ಲಿ.. ಅದೇ ಶಾನ್ವಿ ಶ್ರೀವಾತ್ಸವ್.