Print 
dhruva sarja,

User Rating: 0 / 5

Star inactiveStar inactiveStar inactiveStar inactiveStar inactive
 
dhruva sarja to retain his beard for wedding
Dhruva Sarja

ಧ್ರುವ ಸರ್ಜಾ ಮದುವೆಗೆ ರೆಡಿಯಾಗಿದ್ದಾರೆ. ಪ್ರೇರಣಾ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ. ಮದುವೆಯಲ್ಲೂ ಹೀಗೇ ಇರೋಕಾಗುತ್ತಾ..? ಶೇವ್ ಮಾಡಿಕೊಂಡು ಸ್ಮಾರ್ಟ್ ಆಗಿರುತ್ತೇನೆ ಎಂದಿದ್ದರು ಧ್ರುವ. ಅದಕ್ಕೆ ತಕ್ಕಂತೆ ಪೊಗರು ಶೂಟಿಂಗ್ ಮುಗೀತಂತೆ ಅನ್ನೋ ಸುದ್ದಿಯೂ ಬಂದಿತ್ತು. ಆದರೆ, ಈಗಿನ ಅಪ್‌ಡೇಟ್ ಬೇರೆ. ಮದುವೆ ನವೆಂಬರ್ 24ಕ್ಕೆ. ನವೆಂಬರ್ 25ರ ನಂತರ ಮತ್ತೆ ಪೊಗರು ಶೂಟಿಂಗ್ ಇದೆ ಎಂದಿದ್ದಾರೆ ಧ್ರುವಾ.

ಹಾಗಾದರೆ, ಪೊಗರು ಗೆಟಪ್ ಕಂಟಿನ್ಯೂ ಆಗುತ್ತಾ..? ಗೊತ್ತಿಲ್ಲ. ಅಥವಾ ಇನ್ನೂ ಒಂದು ಮಾತಿದೆ. ಪೊಗರುನಲ್ಲಿ ಗಡ್ಡದ ಗೆಟಪ್ ಶೂಟಿಂಗ್ ಮುಗಿದಿದ್ದರೆ, ಗಡ್ಡಕ್ಕೆ ಮುಕ್ತಿ ಸಿಗಲಿದೆ. ಸದ್ಯಕ್ಕೆ ಧ್ರುವ ಸರ್ಜಾ ಪೊಗರು ಹೀಗೇ ಇರಲಿದೆ. ಅದ್ಧೂರಿ, ಭರ್ಜರಿ ಧ್ರುವ ಸದ್ಯಕ್ಕಿಲ್ಲ.