ರಿಷಬ್ ಶೆಟ್ಟಿ ಕ್ರಿಯೇಟಿವ್ ಅನ್ನೋದ್ರಲ್ಲಿ ನೋ ಡೌಟ್. ಅವರ ಮಗನನ್ನೂ ಅಷ್ಟೇ ಕ್ರಿಯೇಟಿವ್ ಆಗಿ ಜನರಿಗೆ ಪರಿಚಯಿಸಿದ್ದಾರೆ ರಿಷಬ್. ಒಂದು ಸ್ಪೆಷಲ್ ಟೀಸರನ್ನೇ ಸೃಷ್ಟಿಸಿ ಬಿಟ್ಟಿದ್ದಾರೆ.
ಅಲ್ಲಿ ಬೆಲ್ಬಾಟಂನ ಎಲ್ ಬೋರ್ಡ್ ಬರ್ತಾನೆ. ಬ್ಯಾಕ್ ಗ್ರೌಂಡಲ್ಲಿ ಬಭ್ರುವಾಹನವ ಕಂಠವೂ ಕೇಳುತ್ತೆ. ಪುಟ್ಟ ಕಂದನ ಮೇಲೆ ಅಪ್ಪ, ಅಮ್ಮ ಏನೇನೆಲ್ಲ ಆಸೆ ಇಟ್ಟುಕೊಳ್ಳಬಹುದೋ.. ಅದರ ಝಲಕ್ಕೂ ಇದೆ. ಎಲ್ಲಕ್ಕಿಂತ ಕಣ್ಮನ ಸೆಳೆಯುವುದು ಒನ್ಸ್ ಎಗೇಯ್ನ್ ಬೆಣ್ಣೆ ಮುರುಕಿನಂತ ರಣ್ವಿತ್ ಶೆಟ್ಟಿ.
ಮಗನ ನಾಮಕರಣಕ್ಕೆ ಏನಾದರೂ ಸ್ಪೆಷಲ್ ಕೊಡಬೇಕು ಎನ್ನಿಸಿತು. ಹೀಗಾಗಿ ಹುಟ್ಟಿದ್ದು ಈ ಟೀಸರ್ ಕಲ್ಪನೆ. ಟೀಸರ್ ಎಲ್ಲರಿಗೂ ಇಷ್ಟವಾಗಿದೆ ಎಂದಿದ್ದಾರೆ ರಿಷಬ್ ಶೆಟ್ಟಿ.