` ಆಯುಷ್ಮಾನ್ ಭವ ಪಕ್ಕಾ ಫ್ಯಾಮಿಲಿ ಸಿನಿಮಾ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
ayushmanbhava comes with many surprises
Ayushmanbhava Movie Image

ಕೆಲವು ಚಿತ್ರಗಳಿರುತ್ತವೆ. ಕೆಟಗರಿ ಬೇರೆ ಬೇರೆ. ಯುವಕರು, ಹುಡುಗಿಯರು, ಪಡ್ಡೆ ಹೈಕ್ಳು, ಮಲ್ಟಿಪ್ಲೆಕ್ಸ್ ಎ ಕ್ಲಾಸ್.. ಹೀಗೆ ಒಂದೊAದು ವರ್ಗಕ್ಕೇ ಮೀಸಲಾದ ಚಿತ್ರಗಳಿರುತ್ತವೆ. ಆದರೆ, ಆಯುಷ್ಮಾನ್ ಭವ ಹಾಗಲ್ಲ. ಇದು ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್.

ಶಿವಣ್ಣ ನಟಿಸಿರುವ, ದ್ವಾರಕೀಶ್ ಚಿತ್ರವಾಗಿರೋ ಕಾರಣ ನೋ ಡಬಲ್ ಮೀನಿಂಗ್. ನೋ ಅಶ್ಲೀಲತೆ. ಒಂದು ಚೆಂದದ ಕಥೆ ಇದ್ದೇ ಇರುತ್ತೆ ಎನ್ನುವುದು ೧೦೦% ಪಕ್ಕಾ.

ಪಿ.ವಾಸು ಡೈರೆಕ್ಷನ್ ಆಗಿರೋ ಕಾರಣ ಅಪ್ಪಟ ಕೌಟುಂಬಿಕ ಸಿನಿಮಾ ಆಗಿರುತ್ತೆ. ಒಂದೊಳ್ಳೆ ಕಥೆ ಇರುತ್ತೆ ಅನ್ನೋದ್ರಲ್ಲಿ ನೋ ಡೌಟ್. ಗುರುಕಿರಣ್ ಹಾಡುಗಳು ಹೃದಯಕ್ಕೇ ನಾಟುತ್ತಿವೆ.

ಅನಂತ್ ನಾಗ್, ಸುಹಾಸಿನಿ, ರಚಿತಾ ರಾಮ್ ಎಲ್ಲರೂ ಇರುವಾಗ ಕಥೆಯಲ್ಲೇನೋ ಸ್ಪೆಷಾಲಿಟಿ ಇದ್ದೇ ಇದೆ ಎಂದರ್ಥ.

ಸಾಹಸ ದೃಶ್ಯಗಳ ಝಲಕ್ ಟ್ರೇಲರಿನಲ್ಲೇ ಸಿಕ್ಕಿದೆ. ನೀರಿನೊಳಗೆ, ಟ್ರೇನ್ ಮೇಲೆ, ಕಡಿನಲ್ಲಿ ನಡೆದಿರುವ ಸಾಹಸಗಳು ಮೈ ನವಿರೇಳಿಸುತ್ತವಂತೆ. ಶಿವಣ್ಣ ೫೭ರ ವಯಸ್ಸಿನಲ್ಲೂ ಡ್ಯೂಪ್ ಇಲ್ಲದೆ ಸಾಹಸ ಮಾಡಿದ್ದಾರೆ.

ಇಷ್ಟೆಲ್ಲ ವಿಶೇಷಗಳಿರೋ ಸಿನಿಮಾ ಈಗ ಥಿಯೇಟರುಗಳಲ್ಲಿದೆ. ಯಶಸ್ವೀಭವ ಎಂದುಬಿಡಿ.