` ಭರಾಟೆ ೨೫ : ಸಕ್ಸಸ್ ಪಾರ್ಟಿ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
bharaat 25 days success celebrations
Bharaate Movie Image

ಭರಾಟೆ ಚಿತ್ರ ಬಾಕ್ಸಾಫೀಸ್‌ನಲ್ಲಿ ಭರಾಟೆ ಎಬ್ಬಿಸಿದೆ. ೨೧೨ ಸೆಂಟರ್‌ಗಳಲ್ಲಿ ೨೫ ದಿನ ಪೂರೈಸಿದೆ. ಖುಷಿಯಾಗಿರುವ ಭರಾಟೆ ಟೀಂ ನವೆಂಬರ್ ೧೧ರ ಸೋಮವಾರದಂದೇ ಥಿಯೇಟರಿನಲ್ಲಿ ಸಂಭ್ರಮಾಚರಣೆಗೆ ಸಿದ್ಧತೆ ನಡೆಸಿತ್ತು. ಆದರೆ ಅಯೋಧ್ಯೆ ತೀರ್ಪು, ೧೪೪ ಸೆಕ್ಷನ್ ಜಾರಿ ಹಿನ್ನೆಲೆಯಲ್ಲಿ ಸಾಧ್ಯವಾಗಲಿಲ್ಲ. ಹೀಗಾಗಿ ನವೆಂಬರ್ ೧೭ಕ್ಕೆ ಪ್ಲಾನ್ ಮಾಡಿದೆ ಭರಾಟೆ ತಂಡ.

ನ.೧೭ರAದು ನರ್ತಕಿಯಲ್ಲಿ ಪ್ರೇಕ್ಷಕರ ಜೊತೆ ಸಂಭ್ರಮಾಚರಣೆ ಇದೆ. ಅಭಿಮಾನಿಗಳಿಂದ ಅನ್ನ ಸಂತರ್ಪಣೆ, ರಕ್ತದಾನಕ್ಕೂ ಪ್ಲಾನ್ ಮಾಡಲಾಗುತ್ತಿದೆ. ಶ್ರೀಲೀಲಾ ನಾಯಕಿಯಾಗಿರುವ ಭರಾಟೆ ಚಿತ್ರದಲ್ಲಿ ಸಾಯಿಕುಮಾರ್, ರವಿಶಂಕರ್ ಮತ್ತು ಅಯ್ಯಪ್ಪ ಮೂವರೂ ಸೋದರರು ಒಟ್ಟಿಗೇ ನಟಿಸಿ ಅಭಿಮಾನಿಗಳಿಗೆ ಥ್ರಿಲ್ ಕೊಟ್ಟಿದ್ದರು. ಭರ್ಜರಿ ಚೇತನ್ ಕುಮಾರ್ ಈಗ ಈ ಚಿತ್ರದಿಂದ ಭರಾಟೆ ಚೇತನ್ ಆಗಿದ್ದಾರೆ.

India Vs England Pressmeet Gallery

Odeya Audio Launch Gallery