ಶಿವರಾಜ್ ಕುಮಾರ್ ಅಭಿನಯದ ಆಯುಷ್ಮಾನ್ ಭವ ಚಿತ್ರ ಹುಟ್ಟಿಸಿರುವ ಕುತೂಹಲ ಸಣ್ಣ ಮಟ್ಟದ್ದಲ್ಲ. ದ್ವಾರಕೀಶ್ ಬ್ಯಾನರ್, ಪಿ.ವಾಸು, ಶಿವರಾಜ್ ಕುಮಾರ್ ಕಾಂಬಿನೇಷನ್ ಇದೆ ಎನ್ನುವ ಒಂದೇ ಒಂದು ಅಂಶವೇ ಪ್ರೇಕ್ಷಕರಿಗೆ ಥ್ರಿಲ್ ಹುಟ್ಟಿಸಿದೆ. ಅವರ ಜೊತೆಯಲ್ಲಿ ಅನಂತ್ ನಾಗ್, ಸುಹಾಸಿನಿ ಪ್ರಮುಖ ಪಾತ್ರದಲ್ಲಿದ್ದಾರೆ, ಗುರುಕಿರಣ್ ಅವರ ೧೦೦ನೇ ಚಿತ್ರವೂ ಇದೇ ಎಂದು ಗೊತ್ತಾದ ಮೇಲೆ ಕುತೂಹಲ ಮೌಂಟ್ ಎವರೆಸ್ಟ್ ಎತ್ತರಕ್ಕೇರಿದೆ. ಇದೇ ನವೆಂಬರ್ ೧೫ಕ್ಕೆ ರಿಲೀಸ್ ಆಗುತ್ತಿರುವ ಚಿತ್ರದ ಆನ್‌ಲೈನ್ ಟಿಕೆಟ್ ಬುಕ್ಕಿಂಗ್ ಕೂಡಾ ಶುರುವಾಗಿದೆ.
ಚಿತ್ರದ ವಿತರಣೆ ಜವಾಬ್ದಾರಿಯನ್ನು ಜಯಣ್ಣ ಫಿಲಂಸ್ ಮತ್ತು ಕಾರ್ತಿಕ್ ಗೌಡ ವಹಿಸಿಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ಟಿಕೆಟ್ ಬುಕಿಂಗ್ ಶುರುವಾಗಿದ್ದು, ಕ್ರೇಜ್ ಜೋರಾಗಿದೆ.