ಡಿಂಪಲ್ ಕ್ವೀನ್ ರಚಿತಾ ರಾಮ್ ಅವರ ಆಯುಷ್ಮಾನ್ ಭವ ಇದೇ ವಾರ ರಿಲೀಸ್. ಇದು ಮುಗಿಯುತ್ತಿದ್ದಂತೆಯೇ ಮತ್ತೆ ಬೆನ್ನು ಬೆನ್ನಿಗೆ ರಚಿತಾ ಚಿತ್ರಗಳ ಭರಾಟೆ ಶುರುವಾಗುತ್ತೆ. ಈಗಾಗಲೇ ಏಕ್ ಲವ್ ಯಾ, ೧೦೦, ಏಪ್ರಿಲ್, ಪಂಥ, ಸೀರೆ, ವೀರಂ ಚಿತ್ರಗಳಲ್ಲಿ ತೊಡಗಿಸಿಕೊಂಡಿರೋ ರಚಿತಾ ರಾಮ್, ತೆಲುಗಿನತ್ತಲೂ ಕಾಲಿಟ್ಟಿದ್ದಾರೆ. ಇದರ ಜೊತೆಯಲ್ಲೇ ಒಪ್ಪಿಕೊಂಡಿರೋ ಚಿತ್ರ ಡಾಲಿ.
ಇದು ಡಾಲಿ ಧನಂಜಯ್ ಅಭಿನಯದ ಸಿನಿಮಾ. ಪ್ರಭು ಶ್ರೀನಿವಾಸ್ ನಿರ್ದೇಶನದ ಚಿತ್ರ ಡಾಲಿ. ಡಿಸೆಂಬರ್‌ನಲ್ಲಿ ಸಿನಿಮಾ ಸೆಟ್ಟೇರುತ್ತಿದೆ. ಧನಂಜಯ್ ಮತ್ತು ರಚಿತಾ ರಾಮ್ ಜೋಡಿ ಹೇಗಿರಲಿದೆ..? ಜಸ್ಟ್ ವೇಯ್ಟ್.