` ಅದು ಕಸ್ತೂರಿ ನಿವಾಸ.. ಪುನೀತ್ ಅಣ್ಣಾವ್ರಾದ್ರೆ.. ಪ್ರಥಮ್ ಜಯಂತಿ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
puneeth's kasturi nivasa
Puneeth Rajkumar, Pratham

ನಟ, ನಿರ್ದೇಶಕ ಪ್ರಥಮ್ ಸದಾ ಸುದ್ದಿಯಲ್ಲಿರೋ ಸುದ್ದಿ ಸ್ಟಾರ್. ಏನಾದ್ರೊಂದು ಮಾಡ್ತಾನೇ ಇರ್ತಾರೆ ಪ್ರಥಮ್. ಈಗಲೂ ಅಷ್ಟೆ.. ಈ ಬಾರಿ ಪ್ರಥಮ್ ತುಂಟಾಟಕ್ಕೆ ಬೇಸ್ತು ಬಿದ್ದಿರೋದು ಪುನೀತ್ ರಾಜ್‌ಕುಮಾರ್.

ನಟಭಯಂಕರ ಚಿತ್ರದ ಆಡಿಯೋ ಬಿಡುಗಡೆ ಸಮಾರಂಭಕ್ಕೆ ಪುನೀತ್ ಅವರನ್ನು ಆಹ್ವಾನಿಸಲು ತೆರಳಿದ್ದ ಪ್ರಥಮ್ ಪುನೀತ್ ಎದುರು ತಮಗೆ ಇಷ್ಟವಾದ ಕಸ್ತೂರಿ ನಿವಾಸದ ಕಥೆ ಹೇಳಿದ್ದಾರೆ. ಅಷ್ಟಕ್ಕೇ ನಿಂತಿಲ್ಲ..

ಪುನೀತ್ ಅಣ್ಣಾವ್ರಂತೆ ನಟಿಸಬೇಕು, ಪ್ರಥಮ್ ಜಯಂತಿಯAತೆ ನಟಿಸಬೇಕು ಎಂದು ಹೇಳಿ, ಜಯಂತಿಯಾಗಿ ನಟಿಸಿ ಅಣ್ಣಾವ್ರಿಂದ ಅರ್ಥಾತ್ ಪುನೀತ್ ಅವರಿಂದ ಭಾಷೆ ತಗೊಂಡಿದ್ದಾರೆ.

ಈಗ ಪುನೀತ್ ಜಯಂತಿಗೆ ಅರ್ಥಾತ್ ಪ್ರಥಮ್ ಅವರಿಗೆ ಭಾಷೆ ಕೊಟ್ಟಿದ್ದಾರೆ. ಆಡಿಯೋ ಬಿಡುಗಡೆಗೆ ಬಂದೇ ಬರ್ತೀನಿ ಅಂತಾ. ಅಣ್ಣಾವ್ರು ಕೊಟ್ಟ ಮಾತು ತಪ್ಪೋದಿಲ್ಲ. 

Mugilpete Shooting Pressmeet In Sakleshpura

Odeya Audio Launch Gallery