ಹ್ಯಾಟ್ರಿಕ್ ಹೀರೋ ಶಿವಣ್ಣ ಅಭಿನದಯ ಆಯುಷ್ಮಾನ್ ಭವ ಇದೇ ವಾರ ರಿಲೀಸ್. ಸಿನಿಮಾ ಬಿಡುಗಡೆ ಹತ್ತಿರವಾಗುತ್ತಿದ್ದಂತೆ ಅಭಿಮಾನಿಗಳ ಸಿದ್ಧತೆಯೂ ಜೋರಾಗಿದೆ. ಆ ದಿನ ಕಟೌಟ್ ಕಟ್ಟಬೇಕು. ಹಾರ ಹಾಕಬೇಕು. ಥಿಯೇಟರಿನಲ್ಲಿ ತೋರಣ, ಬಣ್ಣದ ಪೇಪರ್ ಕಟ್ಟಬೇಕು. ದೇವಸ್ಥಾನಗಳಲ್ಲಿ ಪೂಜೆ ಆಗಬೇಕು, ಕುಂಭಳಕಾಯಿ ಒಡೆಯಬೇಕು. ಪಟಾಕಿ ಸಿಡಿಸಬೇಕು, ಆಯುಷ್ಮಾನ್ ಭವ ಪೋಸ್ಟರ್ ಮೆರವಣಿಗೆ ಆಗಬೇಕು, ಆರತಿ ಎತ್ತಬೇಕು, ಕ್ಷೀರಾಭಿಷೇಕ ಮಾಡಬೇಕು.. ಇಷ್ಟೆಲ್ಲ ಆದ ಮೇಲೆ ಹಾಡು, ಕುಣಿತ ಇಲ್ದೇ ಇರುತ್ತಾ..?
ಆಯುಷ್ಮಾನ್ ಭವ ಸಿನಿಮಾ ಕೂಡಾ ಇದಕ್ಕೆ ಹೊರತಾಗಿಲ್ಲ. ಮೊದಲೇ ದ್ವಾರಕೀಶ್ ಬ್ಯಾನರ್‌ನಲ್ಲಿ ನಟಿಸಿರುವ ಚಿತ್ರವಿದು. ಶಿವಣ್ಣ, ದ್ವಾರಕೀಶ್, ರಚಿತಾ ರಾಮ್, ಅನಂತ್ ನಾಗ್,ಸುಹಾಸಿನಿ ಇವರೆಲ್ಲ ಇರೋ ಚಿತ್ರಕ್ಕೆ ಪಿ.ವಾಸು ಡೈರೆಕ್ಷನ್. ಗುರುಕಿರಣ್ ಅವರ ೧೦೦ನೇ ಸಿನಿಮಾ. ಅಬ್ಬಾ ಇಷ್ಟೆಲ್ಲ ವಿಶೇಷ ಇದ್ದ ಮೇಲೆ ಶಿವಣ್ಣನ ಆಯುಷ್ಮಾನ್ ಭವ ಹಬ್ಬವಾಗದಿದ್ದರೆ ಹೇಗೆ..? ನವೆಂಬರ್ ೧೫ ಅಭಿಮಾನಿಗಳ ಪಾಲಿಗೆ ಆಯುಷ್ಮಾನ್ ಭವ ಹಬ್ಬ.