ಒಂದರ ಹಿಂದೊAದು ಚಿತ್ರಗಳಲ್ಲಿ ಸದಾ ಬ್ಯುಸಿಯಾಗಿರುವ ರಚಿತಾ ರಾಮ್ ಅವರಿಗೆ ಪ್ರೇಮ ಭಗ್ನವಾಗಿದೆ. ಅದೆಷ್ಟು ಹುಡುಗರ ಹೃದಯ ಭಗ್ನ ಮಾಡಿದ ಶಾಪ ತಟ್ಟಿತೋ ಏನೋ.. ಈಗ ಅವರ ಲವ್ವೇ ಫೇಲ್ಯೂರು. ಕೈ ಕೊಟ್ಟ ಹುಡುಗ ಯಾರಿರಬಹುದು ಅನ್ನೋ ಡೌಟಾ..? ಅದನ್ನು ಜೋಗಿ ಪ್ರೇಮ್ ಅವರೇ ಹೇಳಬೇಕು. ರಚಿತಾಗೆ ಲವ್ ಫೇಲ್ಯೂರ್ ಮಾಡಿಸಿರೋದೇ ಅವರು. ಎಣ್ಣೆ ಹೊಡೆಸ್ತಿರೋದೂ ಅವರೇನೇ..
ಇದೆಲ್ಲ ಏಕ್ ಲವ್ ಯಾ ಚಿತ್ರಕ್ಕಾಗಿ ನಡೆದಿರೋ ಹಾಡಿನ ಶೂಟಿಂಗ್ ಕಥೆ. ಈ ಚಿತ್ರದಲ್ಲಿ ಎಣ್ಣೆಗೂ ಹೆಣ್ಣಿಗೂ ಎಲ್ಲಿಂದ ಲಿಂಕಿಟ್ಟೋ ಭಗವಂತ ಅನ್ನೋ ಹಾಡಿದೆ. ಇಲ್ಲಿ ಪ್ಯಾಥೋ ಸಾಂಗ್ ಹಾಡೋದು ಹೀರೋ ಅಲ್ಲ, ರಚಿತಾ ರಾಮ್. ಹೀಗಾಗಿ ಈ ಹಾಡು ಲವ್ ಫೇಲ್ಯೂರ್ ಆಗಿರೋ ಎಲ್ಲ ಹೆಣ್ಮಕ್ಳಿಗೆ ಅರ್ಪಣೆ ಎಂದಿದ್ದಾರೆ ಪ್ರೇಮ್.