` ಅಪ್ಪು ಮತ್ತೆ ಬಾಕ್ಸರ್ In ಯುವರತ್ನ..!! - chitraloka.com | Kannada Movie News, Reviews | Image

User Rating: 4 / 5

Star activeStar activeStar activeStar activeStar inactive
 
puneth to once again play boxer in yuvaratna
Yuvaratna Movie Image

ಯುವರತ್ನ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ವಿದ್ಯಾರ್ಥಿಯಾಗಿ ನಟಿಸುತ್ತಿರುವುದು ಗೊತ್ತೇ ಇದೆ. ಸಿನಿಮಾದ ಟೀಸರ್ ನೋಡಿದವರಿಗೆ ಅಪ್ಪು ಬ್ಯಾಸ್ಕೆಟ್ ಬಾಲ್ ಆಟಗಾರ ಎನ್ನುವುದೂ ಗೊತ್ತಾಗುತ್ತೆ. ಈಗ ನಿರ್ದೇಶಕ ಸಂತೋಷ್ ಆನಂದ್ ರಾಮ್ ಹೊಸದೊಂದು ಫೋಟೋ ಹೊರಬಿಟ್ಟಿದ್ದಾರೆ. ಆ ಫೋಟೋ ಪ್ರಕಾರ ಪುನೀತ್ ಬಾಕ್ಸರ್.

ಫೋಟೋದಲ್ಲಿ ಪುನೀತ್ ಅಷ್ಟೇ ಅಲ್ಲ, ಡಾಲಿ ಧನಂಜಯ್ ಕೂಡಾ ಇದ್ದಾರೆ. ಅಂದ್ರೆ ಡಾಲಿ ಮತ್ತು ಅಪ್ಪು ಜೊತೆ ಬಾಕ್ಸಿಂಗ್ ರಿಂಗ್‌ನಲ್ಲಿ ಗುದ್ದಾಟ ಫಿಕ್ಸ್ ಅನ್ನೋದು ಕನ್ಫರ್ಮ್. ಅಂದಹಾಗೆ ಇದು Climax ದೃಶ್ಯದ ಸೀನ್ ಅಂತೆ.

ಈ ಹಿಂದೆ ಮೌರ್ಯ ಹಾಗೂ ಅಣ್ಣಾಬಾಂಡ್ ಚಿತ್ರಗಳಲ್ಲಿ ಪುನೀತ್ ಬಾಕ್ಸರ್ ಆಗಿಯೇ ನಟಿಸಿದ್ದರು. ಈಗ ಮತ್ತೊಮ್ಮೆ ಬಾಕ್ಸರ್ ಅವತಾರವೆತ್ತಿದ್ದಾರೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery