ದೃಶ್ಯ ಚಿತ್ರಕ್ಕೂ ಮೊದಲು ರವಿಚಂದ್ರನ್ ಅವರನ್ನು ಆ ರೀತಿ ನೋಡೋಕೆ ಸಾಧ್ಯವೇ ಇರಲಿಲ್ಲ. ಭಾರತೀಯ ಚಿತ್ರರಂಗದ ವಂಡರ್ ಡೈರೆಕ್ಟರ್ಗಳಲ್ಲಿ ಒಬ್ಬರಾದ ರವಿಚಂದ್ರನ್, ಹೀರೋ ಆಗಿ ಲವ್ವರ್ ಬಾಯ್ ಆಗಿಯೇ ಕಾಣಿಸಿಕೊಂಡಿದ್ದರು. ಅಭಿಮಾನಿಗಳು, ಪ್ರೇಕ್ಷಕರು ಒಪ್ಪುತ್ತಾರೋ ಇಲ್ಲವೋ ಎಂಬ ಆತಂಕದಲ್ಲಿಯೇ ಬೌಂಡರಿ ಹಾಕಿಕೊಂಡಿದ್ದ ರವಿಚಂದ್ರನ್ ಅವರಿಗೆ ಧೈರ್ಯ ನೀಡಿದ್ದು ದೃಶ್ಯ.
ಮಧ್ಯವಯಸ್ಕ ಗೃಹಸ್ಥನಾಗಿ, ಕುಟುಂಬವನ್ನು ರಕ್ಷಿಸಿಕೊಳ್ಳಲು ಅಪರಾಧ ಮುಚ್ಚಿ ಹಾಕುವ ಕ್ರಿಮಿನಲ್ ತಂತ್ರ ಹೆಣೆಯುವವನಾಗಿ ರವಿಚಂದ್ರನ್ ಪ್ರೇಕ್ಷಕರ ಮನಸ್ಸು ಗೆದ್ದುಬಿಟ್ಟರು. ಅದಾದ ಮೇಲೆ ರವಿಚಂದ್ರನ್ ಪ್ರಯೋಗಗಳಿಗೆ ಕೈ ಹಾಕಿದ್ದು. ಅದರ ಮುಂದುವರಿದ ಭಾಗವೇ ಈಗ ಥಿಯೇಟರಿನಲ್ಲಿರೋ ಆ ದೃಶ್ಯ.
ಚಿತ್ರದಲ್ಲಿ ರವಿಚಂದ್ರನ್ ಎರಡು ಗೆಟಪ್ಪಿನಲ್ಲಿದ್ದಾರೆ. ಗುಂಗುರು ಕೂದಲಿಲ್ಲ. ಒಂದು ರೋಲ್ನಲ್ಲಿ ವಾಕಿಂಗ್ ಸ್ಟಿಕ್ ಹಿಡಿದೇ ನಡೆದಾಡುವ ವೃದ್ಧನಾದರೆ, ಇನ್ನೊಂದು ರೋಲ್ನಲ್ಲಿ ಯಂಗ್ ಆಫೀಸರ್.
ದೃಶ್ಯ ಕೊಟ್ಟ ಶಕ್ತಿಯೇ ಆ ದೃಶ್ಯಕ್ಕೂ ಪ್ರೇರಣೆ. ಅದಾದ ಮೇಲೆ ಪ್ರೇಕ್ಷಕರು ನನ್ನನ್ನು ಎಲ್ಲ ರೀತಿಯಲ್ಲಿಯೂ ಒಪ್ಪುತ್ತಾರೆ ಎಂಬ ನಂಬಿಕೆ ಬಂತು. ಹೀಗಾಗಿಯೇ ಕುರುಕ್ಷೇತ್ರದಲ್ಲಿ ಕೃಷ್ಣನಾದೆ, ಅಣ್ಣ, ಅಪ್ಪನ ಪಾತ್ರಗಳಲ್ಲೂ ನಟಿಸಿದೆ. ನನ್ನೊಳಗಿನ ಕಲಾವಿದನಿಗೆ ಈಗ ಫುಲ್ ಕೆಲಸ. ಆ ದೃಶ್ಯವೂ ಅಂಥಾದ್ದೊAದು ಥ್ರಿಲ್ ಕೊಟ್ಟಿದೆ ಎಂದಿದ್ದಾರೆ ರವಿಚಂದ್ರನ್.
ಕೆ.ಮAಜು ನಿರ್ಮಾಣದ ಆ ದೃಶ್ಯ ಚಿತ್ರಕ್ಕೆ ಜಿಗರ್ಥಂಡ ಖ್ಯಾತಿಯ ಶಿವಗಣೇಶ್ ನಿರ್ದೇಶಕ.