` ಶ್ರೀಮುರಳಿಯ ಮದಗಜಕ್ಕೆ ಕೆಜಿಎಫ್ ಪ್ರಶಾಂತ್ ನೀಲ್ ಬಲ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
prashanth neel gives his suggestions to srimurali's madagaja script
Srimurali, Prashanth Neel

ರೋರಿಂಗ್ ಸ್ಟಾರ್ ಶ್ರೀಮುರಳಿ, ಭರಾಟೆಯ ಭರ್ಜರಿ ಸಕ್ಸಸ್ಸಿನ ಜೋಶ್ನಲ್ಲಿದ್ದಾರೆ. ಜೊತೆಯಲ್ಲೇ ಮದಗಜ ಚಿತ್ರಕ್ಕೆ ರೆಡಿಯಾಗುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಸೆಟ್ಟೇರುತ್ತಿರುವ ಚಿತ್ರಕ್ಕೆ ಅಯೋಗ್ಯ ಖ್ಯಾತಿಯ ಮಹೇಶ್ ನಿರ್ದೇಶಕ. ಈಗ ಈ ಚಿತ್ರದ ಕಥೆ, ಚಿತ್ರಕಥೆಗೆ ಪ್ರಶಾಂತ್ ನೀಲ್ ಬಲ ತುಂಬುತ್ತಿದ್ದಾರೆ. ಶ್ರೀಮುರಳಿಯ ಭಾವನೂ ಆಗಿರುವ ಪ್ರಶಾಂತ್, ಕಥೆಯಲ್ಲಿ ಒಂದಿಷ್ಟು ಬದಲಾವಣೆಗೆ ಸಲಹೆ ನೀಡಿದ್ದಾರೆ.

ಮಹೇಶ್ ಅವರ ಜೊತೆ ಪ್ರಶಾಂತ್ ಸಂಪರ್ಕದಲ್ಲಿದ್ದಾರೆ. ಕೆಲವು ಸಲಹೆ ನೀಡಿದ್ದಾರೆ. ಸ್ಕ್ರಿಪ್ಟ್ ಇನ್ನೂ ಚೆನ್ನಾಗಿ ರೂಪುಗೊಳ್ಳುತ್ತಿದೆ ಎಂದು ಖುಷಿಯಾಗಿ ಹೇಳಿಕೊಂಡಿದ್ದಾರೆ ನಿರ್ಮಾಪಕ ಉಮಾಪತಿ. ಮದಗಜ ಚಿತ್ರಕ್ಕಿನ್ನೂ ನಾಯಕಿಯ ಆಯ್ಕೆ ಆಗಿಲ್ಲ.