` ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬದ ಸಂಭ್ರಮಕ್ಕೆ ದರ್ಶನ್ ಮುಖ್ಯ ಅತಿಥಿ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
darshan is chief for radhka's birthday function
Radhika Kumaraswamy, Darshan

ರಾಧಿಕಾ ಕುಮಾರಸ್ವಾಮಿ ಕಂಬ್ಯಾಕ್ ಮಾಡುತ್ತಿದ್ದಾರೆ. ದಮಯಂತಿ ಮತ್ತು ಭೈರಾದೇವಿ ಅನ್ನೋ ಎರಡು ಸಿನಿಮಾಗಳ ಮೂಲಕ ಬರುತ್ತಿದ್ದಾರೆ. ಇವುಗಳಲ್ಲಿ ಭೈರಾದೇವಿಗೆ ಅವರೇ ನಿರ್ಮಾಪಕಿ. ಇದೇ ಮೊದಲ ಬಾರಿಗೆ ನಾಯಕಿ ನಟಿಯೊಬ್ಬರು ಅಘೋರಿಯಾಗಿ ನಟಿಸಿರುವ ಚಿತ್ರವದು. ಇನ್ನೊಂದು ದಮಯಂತಿ. ಈ ಎರಡೂ ಚಿತ್ರಗಳ ಆಡಿಯೋ ಬಿಡುಗಡೆಗೆ ಮುಹೂರ್ತ ಫಿಕ್ಸ್ ಆಗಿದೆ. ನವೆಂಬರ್ ೧೨.

ನವೆಂಬರ್ ೧೨, ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬ. ಆ ದಿನವೇ ಆಡಿಯೋ ರಿಲೀಸ್ ಕಾರ್ಯಕ್ರಮ ಆಯೋಜಿಸಲಾಗಿದ್ದು, ಮುಖ್ಯ ಅತಿಥಿಯಾಗಿ ಬರುತ್ತಿರುವುದು ಚಾಲೆಂಜಿAಗ್ ಸ್ಟಾರ್ ದರ್ಶನ್. ಈ ಹಿಂದೆ ದರ್ಶನ್ ರಾಧಿಕಾ ಅವರ ಜೊತೆ ಮಂಡ್ಯ ಮತ್ತು ಅನಾಥರು ಚಿತ್ರದಲ್ಲಿ ನಟಿಸಿದ್ದಾರೆ. ಈಗ ರಾಧಿಕಾ ಕುಮಾರಸ್ವಾಮಿ ಹುಟ್ಟುಹಬ್ಬದ ಸಂಭ್ರಮವನ್ನು ಹೆಚ್ಚಿಸಲು ಬರುತ್ತಿದ್ದಾರೆ.ಅಂದಹಾಗೆ ರಾಧಿಕಾ ಕುಮಾರಸ್ವಾಮಿಗೆ ನವೆಂಬರ್ ೧೨ಕ್ಕೆ ೩೨ ವರ್ಷ ತುಂಬುತ್ತಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery