Print 
kuri prathap, mane maratakkidhe,

User Rating: 0 / 5

Star inactiveStar inactiveStar inactiveStar inactiveStar inactive
 
kuri prathap as rock star raja in mane maratakkidhe
Mane Maratakihe Movie Image

ಸದ್ಯಕ್ಕೆ ಕುರಿ ಪ್ರತಾಪ್ ಇರೋದು ಬಿಗ್ ಬಾಸ್ ಮನೆಯಲ್ಲಿ. ಆದರೆ ಅವರೀಗ ರಾಕ್ ಸ್ಟಾರ್ ಆಗಿದ್ದಾರೆ. ಯೆಸ್.. ಇದು ರಾಕಿಂಗ್ ಸ್ಟಾರ್ ಅಲ್ಲ, ರಾಕ್ ಸ್ಟಾರ್. ಮಂಜು ಸ್ವರಾಜ್ ನಿರ್ದೇಶನದ ಮನೆ ಮಾರಾಟಕ್ಕಿದೆ ಚಿತ್ರದಲ್ಲಿ ಕುರಿ ಪ್ರತಾಪ್ ಕಾಮಿಡಿ ರೋಲ್ನಲ್ಲಿ ನಟಿಸಿದ್ದಾರೆ.

ಈ ಚಿತ್ರದಲ್ಲಿ ಅವರು ಸಿನಿಮಾ ಹೀರೋ ಆಗಿ ನಟಿಸಿದ್ದು, ಅವರಿಗೆ ನೀಡಿರೋ ಬಿರುದು ರಾಕ್ ಸ್ಟಾರ್. ರಾಕ್ ಸ್ಟಾರ್ಗೆ ಜೈ ಎಂದು ಅಭಿಮಾನಿಗಳು ಕೂಗುತ್ತಾ.. ತಾವು ಕೂಡಾ ರಾಕ್ ಸ್ಟಾರ್ಗೆ ಜೈ ಅಂತಾರೆ ಕುರಿ. ಯಾರು ಇದು ರಾಕ್ ಸ್ಟಾರ್ ಎಂದಾಗ ‘ಈಗೆಲ್ಲ ಅಭಿಮಾನಿಗಳು ಬಿರುದು ಕೊಡುವವರೆಗೆ ಕಾಯಬಾರದು. ನಾವೇ ಇಟ್ಕೊಬೇಕು ಎನ್ನುತ್ತಾರೆ ಉಮೇಶ್.

ಶೃತಿ ಹರಿಹರನ್, ಕಾರುಣ್ಯ ರಾಮ್ ನಟಿಸಿರುವ ಚಿತ್ರಕ್ಕೆ ದೆವ್ವಗಳಿವೆ ಎಚ್ಚರಿಕೆ ಅನ್ನೋ ಟ್ಯಾಗ್ ಲೈನ್ ಕೂಡಾ ಇದೆ. ಎಸ್.ವಿ. ಬಾಬು ನಿರ್ಮಾಣದ ಸಿನಿಮಾ, ಮುಂದಿನ ವಾರ ರಿಲೀಸ್ ಆಗುತ್ತಿದೆ.