` ಎಣ್ಣೆ ಮತ್ತಿಗೆ ಬಿದ್ರಾ ಜೋಗಿ ಪ್ರೇಮ್..? - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
jogi prem's photo with liqyor bottle
Jogi Prem

ಜೋಗಿ ಪ್ರೇಮ್ ಮದ್ಯಪಾನ ಮಾಡಲ್ಲ. ಅದು ಇಂಡಸ್ಟಿçಯಲ್ಲಿರೋವ್ರಿಗೆ ಗೊತ್ತಿರೋ ವಿಷಯ. ಆದರೆ ಈ ಫೋಟೋ ನೋಡಿದೋವ್ರು ಕನ್‌ಫ್ಯೂಸ್ ಆಗೋದು ಸಹಜ. ಇಷ್ಟುದ್ದದ ಬಾಟಲ್ಲು. ಹಾಗಂತ ರಕ್ಷಿತಾ ಪ್ರೇಮ್ ಆಗಲೀ, ಜೋಗಿ ಪ್ರೇಮ್ ಅಭಿಮಾನಿಗಳಾಗಲೀ ಶಾಕ್ ಆಗಬೇಕಿಲ್ಲ. ಪ್ರೇಮ್ ಇದನ್ನು ಹಿಡ್ಕೊಂಡಿರೋದೇ ಹಾಡಿಗಾಗಿ.

ರಕ್ಷಿತಾ ಅವರ ಸೋದರ ರಾಣಾ ಹೀರೋ ಆಗಿರುವ ಚಿತ್ರಕ್ಕೆ ಪ್ರೇಮ್ ಡೈರೆಕ್ಟರ್. ರೀಷ್ಮಾ ಅನ್ನೋ ಹೀರೋಯಿನ್ ಪರಿಚಯವಾಗುತ್ತಿದ್ದರೆ, ರಚಿತಾ ರಾಮ್ ಒಂದು ಇಂಪಾರ್ಟೆAಟ್ ರೋಲ್ ಮಾಡುತ್ತಿದ್ದಾರೆ. ಅದೇನು ಎನ್ನುವುದು ಸಸ್ಪೆನ್ಸ್.

ಈ ಚಿತ್ರದಲ್ಲಿ ಒಂದು ಎಣ್ಣೆ ಹಾಡಿನ ಶೂಟಿಂಗ್ ನಡೆಯುತ್ತಿದೆ. ಮ್ಯೂಸಿಕ್ ಕೊಟ್ಟಿರೋದು ಎಣ್ಣೆ ಹಾಡುಗಳ ಸರದಾರ ಅರ್ಜುನ್ ಜನ್ಯಾ. ಖಾಲಿ ಕ್ವಾಟ್ರು, ಫೋನೂ ಇಲ್ಲ ಮೆಸೇಜಿಲ್ಲ ನಿಂದು.. , ನಾನ್ ಮನೆಗ್ ಹೋಗೋದಿಲ್ಲ.. ಹೀಗೆ ಸೂಪರ್ ಹಿಟ್ ಎಣ್ಣೆ ಹಾಡು ಕೊಟ್ಟಿರೋ ಅರ್ಜುನ್ ಜನ್ಯಾ, ಹೊಸ ಹುಡುಗನ ಚಿತ್ರಕ್ಕೂ ಒಂದು ಕಿಕ್ಕು ಕೊಟ್ಟಿದ್ದಾರೆ. ಆ ಹಾಡಿನ ಶೂಟಿಂಗ್ ವೇಳೆಯಲ್ಲೇ ಪ್ರೇಮ್ ಈ ಬಾಟಲ್ ಹಿಡಿದಿರೋದು.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery