ಡಿಂಪಲ್ ಕ್ವೀನ್ ರಚಿತಾ ರಾಮ್ ಇಂಡಸ್ಟಿçಗೆ ಬಂದು ಕೆಲವು ವರ್ಷಗಳೇ ಆಗಿವೆ. ಬಹುತೇಕ ಎಲ್ಲ ಸ್ಟಾರ್ ನಟರ ಜೊತೆಯಲ್ಲೂ ನಟಿಸಿರುವ ರಚಿತಾ ರಾಮ್, ಕನ್ನಡದ ಈ ಇಬ್ಬರೂ ಸ್ಟಾರ್ ಡೈರೆಕ್ಟರ್ ಚಿತ್ರಗಳಲ್ಲಿ ನಟಿಸಿರಲಿಲ್ಲ. ಯೋಗರಾಜ್ ಭಟ್ ಮತ್ತು ಶಶಾಂಕ್ ಇಬ್ಬರ ಚಿತ್ರಗಳಲ್ಲೂ ರಚಿತಾ ರಾಮ್ ಇರಲಿಲ್ಲ. ಈಗ ಸಮಯ ಕೂಡಿ ಬಂದಿದೆ. ಭಟ್ಟರು ಮತ್ತು ಶಶಾಂಕ್ ಇಬ್ಬರೂ ಒಟ್ಟಿಗೇ ನಿರ್ಮಿಸುತ್ತಿರುವ ಹೊಸ ಚಿತ್ರದಲ್ಲಿ ರಚಿತಾ ರಾಮ್ ನಾಯಕಿ.
ರಿಷಿ ನಾಯಕರಾಗಿರುವ ಚಿತ್ರಕ್ಕಿನ್ನೂ ಟೈಟಲ್ ಫಿಕ್ಸ್ ಆಗಿಲ್ಲ. ರಚಿತ ಇಲ್ಲಿ ಇಂಗ್ಲೆAಡಿನಿAದ ವಾಪಸ್ ಆದ ಎನ್ಆರ್ಐ ಪಾತ್ರದಲ್ಲಿದ್ದರೆ, ರಿಷಿ ಪಕ್ಕಾ ಲೋಕಲ್ ಹುಡುಗ. ರಿಷಿ ಜೊತೆಯಲ್ಲೂ ರಚಿತಾಗಿದು ಫಸ್ಟ್ ಸಿನಿಮಾ. ಇನ್ನು ಚಿತ್ರದ ಮತ್ತೊಂದು ಪ್ರಮುಖ ಪಾತ್ರದಲ್ಲಿ ಅನಂತ್ ನಾಗ್ ಇದ್ದಾರೆ.
ಚಿತ್ರಕ್ಕೆ ಭಟ್ಟರ ಕ್ಯಾಂಪಿನ ಹುಡುಗ ಮೋಹನ್ ಸಿಂಗ್ ನಿರ್ದೇಶಕರಾಗಿದ್ದಾರೆ. ಸಿನಿಮಾ ಡಿಸೆಂಬರ್ ತಿಂಗಳಲ್ಲಿ ಚಿತ್ರೀಕರಣ ಶುರು ಮಾಡಲಿದೆ.