ನಿಮಗೆ ನಮ್ಮ ಸಿನಿಮಾದಲ್ಲಿ ನಟಿಸುವ ಆಸೆಯಿದೆಯೇ..? ನಮ್ಮಲ್ಲಿ ನಿಮಗಿದೆ ಅವಕಾಶ..! ಬನ್ನಿ, ಭಾಗವಹಿಸಿ, ಅವಕಾಶ ನಿಮ್ಮದಾಗಿಸಿಕೊಳ್ಳಿ..
ಇಂಥಾದ್ದೊAದು ಮೇಯ್ಲ್ ಬಂದರೆ ಉಪೇಕ್ಷೆ ಮಾಡುವವರೇ ಹೆಚ್ಚು. ಆದರೆ, ಮೇಯ್ಲ್ ಕಳಿಸಿರೋದು ಪ್ರಶಾಂತ್ ನೀಲ್ ಆದರೆ... ಪ್ರತಿಭಾವಂತರು ಎದ್ದೆನೋ.. ಬಿದ್ದೆನೋ.. ಎಂದು ಓಡೋಡಿ ಬರುತ್ತಾರೆ. ಆದರೆ ಅದೂ ನಿಜವಲ್ಲ. ನನ್ನ ಹೆಸರಲ್ಲಿ ಮೇಯ್ಲ್ ಬಂದರೆ ಎಚ್ಚರಿಕೆ, ಮೋಸ ಹೋಗಬೇಡಿ ಎಂದು ಕೆಜಿಎಫ್ ನಿರ್ದೇಶಕ ಪ್ರಶಾಂತ್ ನೀಲ್ ಅವರೇ ಎಚ್ಚರಿಕೆ ಕೊಟ್ಟಿದ್ದಾರೆ.
ಪ್ರಶಾಂತ್‌ನೀಲ್‌ಕನೆಕ್ಟ್÷@ಜಿಮೇಯ್ಲ್.ಕಾಮ್ ಹೆಸರಲ್ಲಿ ಕೆಲವು ಪ್ರತಿಭಾವಂತ ಕಲಾವಿದರಿಗೆ ಪ್ರಶಾಂತ್ ಹೆಸರಲ್ಲಿಮೆಸೇಜ್ ಹೋಗಿದೆ.
ಹೀಗಾಗಿ ಸ್ವತಃ ಪ್ರಶಾಂತ್ ನೀಲ್ ಅವರೇ ಎಚ್ಚರಿಕೆ ನೀಡಿದ್ದಾರೆ. ಕೆಜಿಎಫ್ ಕುರಿತ ಯಾವುದೇ ಮೆಸೇಜ್ ಇದ್ದರೆ, ಅದನ್ನು ಹೊಂಬಾಳೆ ಫಿಲಂಸ್ ಮೂಲಕವೇ ನಡೆಸುತ್ತೇವೆ. ಅದು ಮಾತ್ರವೇ ಅಧಿಕೃತ ಎಂದು ಎಚ್ಚರಿಕೆ ನೀಡಿದ್ದಾರೆ ಪ್ರಶಾಂತ್ ನೀಲ್.