ಅನಂತ್ ನಾಗ್, ಕನ್ನಡಕ್ಕಷ್ಟೇ ಸೀಮಿತರಾದ ಕಲಾವಿದರಲ್ಲ. ಈಗಾಗಲೇ ಹಿಂದಿ, ತೆಲುಗು, ತಮಿಳು, ಮರಾಠಿ, ಬೆಂಗಾಲಿ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿರುವ ಕಲಾವಿದ. ಯೆಸ್ ಎಂದರೆ ಬಾಗಿಲು ತೆರೆಯಲು ಬಾಲಿವುಡ್ ಮಂದಿ ಕಾಯುತ್ತಿದ್ದಾರೆ. ಆದರೆ ಕನ್ನಡಕ್ಕಷ್ಟೇ ಸೀಮಿತವಾಗಿರೋ ಅನಂತ್ ನಾಗ್ ಈಗ ತೆಲುಗು ಚಿತ್ರರಂಗಕ್ಕೆ ಹೊರಟಿದ್ದಾರೆ. ಅದೂ.. ೪೨ ವರ್ಷಗಳ ನಂತರ.
೪೨ ವರ್ಷಗಳ ಹಿಂದೆ ತೆಲುಗಿನಲ್ಲಿ ಪ್ರೇಮಲೋಕಲು ಚಿತ್ರದಲ್ಲಿ ನಟಿಸಿದ್ದ ಅನಂತ್ ನಾಗ್, ಈಗ ಭೀಷ್ಮ ಚಿತ್ರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಭೀಷ್ಮ ಚಿತ್ರದಲ್ಲಿ ನಿತಿನ್ ಹೀರೋ. ರಶ್ಮಿಕಾ ಮಂದಣ್ಣ ನಾಯಕಿ. ಈ ಚಿತ್ರದಲ್ಲಿ ಅನಂತ್ ಸಾವಯವ ಕೃಷಿಯಲ್ಲಿ ತೊಡಗಿಸಿಕೊಂಡ ಬ್ರಹ್ಮಚಾರಿಯಾಗಿ ನಟಿಸುತ್ತಿದ್ದಾರೆ.