ಕಥಾ ಸಂಗಮ. ೭ ನಿರ್ದೇಶಕರ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ. ಈ ಚಿತ್ರದಲ್ಲಿ ಹರಿಪ್ರಿಯಾ ಮತ್ತು ರಿಷಬ್ ಶೆಟ್ಟಿ ಮತ್ತೆ ಜೊತೆಯಾಗಿದ್ದಾರೆ. ಇದರಲ್ಲಿ ಹರಿಪ್ರಿಯಾ ಪಿಹೆಚ್ಡಿ ವಿದ್ಯಾರ್ಥಿನಿಯಾದರೆ, ರಿಷಬ್ ಶೆಟ್ಟಿಯದ್ದು ಮಾನಸಿಕ ಅಸ್ವಸ್ಥ ಭಿಕ್ಷÄಕನ ಪಾತ್ರ. ಜೊತೆಯಲ್ಲಿ ಒಂದ ನಾಯಿಯೂ ಇದೆ. ಇಷ್ಟೆಲ್ಲ ಇದ್ದರೂ, ಇಬ್ಬರ ಪಾತ್ರಕ್ಕೂ ಮಾತಿಲ್ಲ.. ಕಥೆಯಿಲ್ಲ. ಮೌನಂ ಶರಣಂ ಪಾತ್ರಾಮಿ.. ಆದರೂ ಈ ಪಾತ್ರಕ್ಕೆ ಹರಿಪ್ರಿಯಾ ಡಬ್ ಮಾಡಿದ್ದಾರಂತೆ.
ನಿರ್ದೇಶಕರು ಒಂದು ದಿನ ಫೋನ್ ಮಾಡಿ ಡಬ್ಬಿಂಗ್ಗೆ ಬನ್ನಿ ಎಂದಾಗ ಆಶ್ಚರ್ಯವಾಯಿತು. ಸಂಭಾಷಣೆಯೇ ಇಲ್ಲದ ಪಾತ್ರಕ್ಕೆ ಯಾವ ಡಬ್ಬಿಂಗ್ ಎಂದುಕೊAಡೆ. ಆದರೆ, ಕೆಲವು ಉಸಿರು, ಶಬ್ಧಗಳನ್ನು ನನ್ನ ಧ್ವನಿಯಲ್ಲೇ ತೆಗೆದುಕೊಂಡರು. ಮಾತೇ ಇಲ್ಲದ ಈ ಪಾತ್ರದಲ್ಲಿ ನಾನು, ರಿಷಬ್ ಕಣ್ಣು, ಮುಖದಲ್ಲೇ ಭಾವನೆಗಳನ್ನು ವ್ಯಕ್ತಪಡಿಸಿದ್ದೇವೆ ಎನ್ನುತ್ತಾರೆ ಹರಿಪ್ರಿಯಾ.
೨೯೭೬ರಲ್ಲಿ ಪುಟ್ಟಣ್ಣ ಕಣಗಾಲ್ ೩ ಕಥೆಗಳನ್ನಿಟ್ಟುಕೊಂಡು ಕಥಾಸಂಗಮ ಚಿತ್ರ ಮಾಡಿದ್ದರು. ಅವರ ಪ್ರೇರಣೆಯಿಂದಲೇ ಶುರುವಾದ ಈ ಕಥಾಸಂಗಮ ಚಿತ್ರದ ಟ್ರೇಲರ್ನ್ನು ಪುಟ್ಟಣ್ಣನವರ ಪತ್ನಿ ಲಕ್ಷಿö್ಮÃ ಕಣಗಾಲ್ ಅವರಿಂದ ರಿಲೀಸ್ ಮಾಡಿಸುತ್ತಿದೆ ಕಥಾಸಂಗಮ ಟೀಂ.