` ರಂಗನಾಯಕಿಯಲ್ಲಿ ಗೆದ್ದವರೇ ಎಲ್ಲ..! - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ranganayaki movie gets appreciation form all
Ranganayaki Movie Image

ನವೆಂಬರ್ ೧ಕ್ಕೆ ರಿಲೀಸ್ ಆದ ರಂಗನಾಯಕಿ ಚಿತ್ರ ಗೆದ್ದಿದೆ. ಪ್ರೇಕ್ಷಕರ ಮೆಚ್ಚುಗೆ, ವಿಮರ್ಶಕರ ಮೆಚ್ಚುಗೆ ಎರಡನ್ನೂ ಸ್ವೀಕರಿಸಿ ಗೆಲುವಿನ ನಗು ಬೀರಿದ್ದಾಳೆ ರಂಗನಾಯಕಿ. ಅತ್ಯಾಚಾರಕ್ಕೊಳಗಾದ ಹೆಣ್ಣು ನ್ಯಾಯಕ್ಕಾಗಿ ನಡೆಸುವ ಹೋರಾಟದ ಕಥೆ ಕೇವಲ ಸನಿಮಾ ಆಗಿಯಷ್ಟೇ ಉಳಿಯದೆ ಕಾಡುವ ಚಿತ್ರವಾಗಿದೆ ಎನ್ನುತ್ತಿದ್ದಾರೆ ಪ್ರೇಕ್ಷಕರು.

ನಾಯಕಿ ಆದಿತಿ ಪ್ರಭುದೇವ, ಈಗಿನ್ನೂ ಚಿತ್ರರಂಗಕ್ಕೆ ಕಾಲಿಟ್ಟು ಬೆಳೆಯುತ್ತಿರುವ ಪ್ರತಿಭೆ. ಆರಂಭದ ದಿನಗಳಲ್ಲೇ ಸವಾಲಿನ ಪಾತ್ರ ನೀಡಿ ಇಡೀ ಚಿತ್ರವನ್ನು ಆವರಿಸಿಕೊಂಡು ಗೆದ್ದಿದ್ದಾರೆ ಆದಿತಿ.

ಆದಿತಿ ಪ್ರಭುದೇವ ಅವರಂತಹ ಹೊಸ ಪ್ರತಿಭೆಯಿಂದ ಅದ್ಭುತ ಅಭಿನಯ ತೆಗೆಸಿರುವುದು ಹಾಗೂ ಕಥೆಯನ್ನು ಎಲ್ಲಿಯೂ ಸಂಯಮ ತಪ್ಪದಂತೆ ಹೇಳಿ ಗೆದ್ದಿರುವುದು ನಿರ್ದೇಶಕ ದಯಾಳ್ ಪದ್ಮನಾಭನ್. ಇತ್ತೀಚೆಗೆ ಸತತವಾಗಿ ವಿಭಿನ್ನ ಚಿತ್ರಗಳನ್ನೇ ನೀಡುತ್ತಿರುವ ದಯಾಳ್ ಅವರದ್ದು, ಒನ್ಸ್ ಎಗೇಯ್ನ್  ವಿಕ್ಟರಿ.

ಮತ್ತೊಮ್ಮೆ ಚುರುಕು ಸಂಭಾಷಣೆ ಮೂಲಕ ಕಿಡಿ ಹತ್ತಿಸಿರುವ ನವೀನ್ ಕೃಷ್ಣ, ಡೈಲಾಗ್ಸ್ ಮೂಲಕವೇ ಹೃದಯ ತಾಕುತ್ತಾರೆ. ತ್ರಿವಿಕ್ರಮ್ ಮತ್ತು ಶ್ರೀನಿವಾಸ್ ಇಬ್ಬರದ್ದೂ ಇರುವ ಪುಟ್ಟ ಅವಧಿಯಲ್ಲೇ ವಂಡರ್ ಆ್ಯಕ್ಟಿಂಗ್.

ಎಲ್ಲರಿಗಿAತ ದೊಡ್ಡ ಗೆಲುವಿನ ನಗು ನಿರ್ಮಾಪಕ ಎಸ್.ವಿ.ನಾರಾಯಣ್ ಅವರದ್ದು. ಅತ್ಯಾಚಾರಕ್ಕೊಳಗಾದ ಸಂತ್ರಸ್ತ ಯುವತಿ, ನರಳುತ್ತಾ.. ಅಳುತ್ತಾ.. ಕೂತುಕೊಳ್ಳದೆ ಹೋರಾಟಕ್ಕಿಳಿಯುತ್ತಾಳಲ್ಲ. ಅದು ನನಗೆ ಸಬ್ಜೆಕ್ಟಿನಲ್ಲಿ ಇಷ್ಟವಾದ ಸಂಗತಿ ಎನ್ನುತ್ತಾರೆ ಎಸ್.ವಿ.ನಾರಾಯಣ್. ಪ್ರೇಕ್ಷಕರಿಗೂ ಅಷ್ಟೆ.. ನಾಯಕಿ ರಂಗನಾಯಕಿಯ ಹೋರಾಟವೇ ಇಷ್ಟವಾಗಿದೆ.