ನಿರೀಕ್ಷೆ ನಿಜವಾಗಿದೆ. ಆಯುಷ್ಮಾನ್ ಭವ ಚಿತ್ರ ಬಿಡುಗಡೆ ತಡವಾಗಿದ್ದಕ್ಕೆ ನಿಜವಾದ ಕಾರಣ ಈಗ ಹೊರಬಿದ್ದಿದೆ. ಅದನ್ನು ಸ್ವತಃ ಶಿವರಾಜ್ ಕುಮಾರ್ ಅವರೇ ಹೇಳಿಕೊಂಡಿದ್ದಾರೆ. ಆಯುಷ್ಮಾನ್ ಭವ ಬಿಡುಗಡೆ ವಿಳಂಬಕ್ಕೆ ಕಾರಣವಾಗಿದ್ದು, ಅನಿಮಲ್ ಬೋರ್ಡ್.
ಭುಜದ ನೋವಿತ್ತು. ಯೋಗಿ ಬೇಡ ಎಂದಿದ್ದರೂ ಕೇಳದೆ ಎಲ್ಲ ಕೆಲಸವನ್ನೂ ಮುಗಿಸಿಕೊಟ್ಟಿದ್ದೆ. ನವೆಂಬರ್ ೧ಕ್ಕೆ ರಿಲೀಸ್ ಮಾಡಿ ಎಂದು ನಾನೇ ಹೇಳಿದ್ದೆ. ಯೋಗಿಯೂ ಎಲ್ಲ ಮುತುವರ್ಜಿ ವಹಿಸಿ ಎಲ್ಲವನ್ನೂ ಸಿದ್ಧಪಡಿಸಿದರು. ಅವುಗಳ ಜೊತೆಗೆ ಅನಿಮಲ್ ಬೋರ್ಡ್ ವತಿಯಿಂದ ಪ್ರಮಾಣ ಪತ್ರ ಸಿಗುವುದು ತಡವಾಯಿತು ಎಂದಿದ್ದಾರೆ.
ನನ್ನ ಆರಂಭದ ದಿನಗಳಲ್ಲಿ ಇಂಥದ್ದೆಲ್ಲ ಇರಲಿಲ್ಲ. ನನ್ನ ೩ನೇ ಚಿತ್ರದಲ್ಲೇ ಚಿರತೆ ಜೊತೆ ಫೈಟ್ ಮಾಡಿದ್ದೆ. (ಮನ ಮೆಚ್ಚಿದ ಹುಡುಗಿ) ಮೊಸಳೆ ಜೊತೆ ಫೈಟ್ ಮಾಡಿದ್ದೆ. ಆಗೆಲ್ಲ ಯಾವ ಸಮಸ್ಯೆಗಳೂ ಇರಲಿಲ್ಲ. ಈಗ ಸಮಸ್ಯೆ ಆಗುತ್ತಿದೆ. ನಮಗೂ ಅವರ ಬಗ್ಗೆ ಗೌರವ ಇದೆ. ಆದರೆ, ಸಿನಿಮಾ ರಂಗದ ಬಗ್ಗೆ ಒಂಚೂರು ವಿನಾಯಿತಿ ಇರಲಿ ಎಂದಿದ್ದಾರೆ.
ಅಷ್ಟೇ ಅಲ್ಲ, ಇದನ್ನೆಲ್ಲ ಮಾಡುವ ಬದಲು ದೇಶಾದ್ಯಂತ ಮಾಂಸಾಹಾರವನ್ನೇ ನಿಷೇಧಿಸಿಬಿಡಿ ಎಂದು ವ್ಯಂಗ್ಯ ಮಾಡಿದ್ದಾರೆ ಶಿವಣ್ಣ.