ದೃಶ್ಯದಲ್ಲಿ ರವಿಚಂದ್ರನ್ ಹೀರೋ. ಆದರೆ ಕ್ರೆöÊಂ ಮಾಡಿ ಅದನ್ನು ಮುಚ್ಚಿಹಾಕುವ ತಂತ್ರಗಾರ. ಈಗ ಬರ್ತಿರೋದು ಆ ದೃಶ್ಯ. ಈ ಚಿತ್ರದಲ್ಲಿ ರವಿಚಂದ್ರನ್ ನಿವೃತ್ತ ಪೊಲೀಸ್ ಆಫೀಸರ್ ಆಗಿದ್ದಾರೆ. ಕಥೆ ಏನು ಎಂದರೆ ರವಿಚಂದ್ರನ್ ಹೇಳೋದಿಷ್ಟು `ಕಥೆಯ ಸಣ್ಣದೊಂದು ಎಳೆ ಹೇಳಿದರೂ ಥ್ರಿಲ್ ಹೋಗುತ್ತೆ. ಏಕೆಂದರೆ ಇದು ಸಸ್ಪೆನ್ಸ್ ಜಾನರ್ ಸಿನಿಮಾ. ಎರಡು ಶೇಡ್‌ಗಳಲ್ಲಿ ಕಾಣಿಸಿಕೊಂಡಿದ್ದೇನೆ. ನನ್ನ ಪಾತ್ರ ಹೀರೋನಾ..? ವಿಲನ್ನಾ..? ಸಿನಿಮಾ ನೋಡಿದ್ಮೇಲಷ್ಟೇ ಗೊತ್ತಾಗುತ್ತೆ' ಎಂದಿದ್ದಾರೆ.
ಶಿವಗಣೇಶ್ ನಿರ್ದೇಶನದ ಚಿತ್ರವಿದು. ಕೆ.ಮಂಜು ನಿರ್ಮಾಣದ ಚಿತ್ರದಲ್ಲಿ ಅರ್ಜುನ್ ಗೌಡ, ಯಶ್ ಶೆಟ್ಟಿ, ಚೈತ್ರಾ ಆಚಾರ್, ಅಚ್ಯುತ್ ಕುಮಾರ್ ಮೊದಲಾದವರು ನಟಿಸಿದ್ದಾರೆ.