` ಕ್ರೇಜಿಸ್ಟಾರ್ ರವಿಚಂದ್ರನ್ ಇನ್ಮುಂದೆ ಡಾ.ರವಿಚಂದ್ರನ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ravichandran gets honorary doctorate
Ravichandran

ಕ್ರೇಜಿಸ್ಟಾರ್, ರಣಧೀರ, ಅಂಜದಗಂಡು, ಮಲ್ಲ.. ಎಂದೆಲ್ಲ ಅಭಿಮಾನಿಗಳಿಂದ ಕರೆಸಿಕೊಳ್ಳುವ ರವಿಚಂದ್ರನ್, ಇನ್ನು ಮುಂದೆ ಡಾ.ರವಿಚಂದ್ರನ್ ಆಗಲಿದ್ದಾರೆ. ಬೆಂಗಳೂರಿನ ಸಿಎಂಆರ್ ಯುನಿವರ್ಸಿಟಿ, ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ನೀಡುತ್ತಿದೆ. ನವೆಂಬರ್ 3ರಂದು ಯುನಿವರ್ಸಿಟಿ, ರವಿಚಂದ್ರನ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ.

ರವಿಚಂದ್ರನ್ ಚಿತ್ರರಂಗಕ್ಕೆ ಬಂದಿದ್ದು ಬಾಲನಟನಾಗಿ. 1971ರಲ್ಲಿ ಕುಲಗೌರವ ಚಿತ್ರದಲ್ಲಿ ಬಾಲನಟ. ನಂತರ ಖದೀಮ ಕಳ್ಳರು ಚಿತ್ರಕ್ಕೆ ನಿರ್ಮಾಪಕರಾದರು. ಆ ಚಿತ್ರದಲ್ಲಿ ವಿಲನ್ ಆಗಿ ಪುಟ್ಟ ಪಾತ್ರ ಮಾಡಿದ್ದ ರವಿಚಂದ್ರನ್, ನಾನೇ ರಾಜ ಚಿತ್ರದ ಮೂಲಕ ಹೀರೋ ಆದರು. ಪ್ರೇಮಲೋಕದ ಮೂಲಕ ನಿರ್ದೇಶಕರಾಗಿಯೂ ಗೆದ್ದ ರವಿಚಂದ್ರನ್, ನಾನು ನನ್ನ ಹೆಂಡ್ತೀರು ಚಿತ್ರದಿಂದ ಸಂಗೀತ ನಿರ್ದೇಶಕರೂ ಆದರು. ಒಂದು ರೀತಿಯಲ್ಲಿ ರವಿಚಂದ್ರನ್, ಚಿತ್ರರಂಗದ ಆಲ್‍ರೌಂಡರ್. ಈಗ ಡಾ.ರವಿಚಂದ್ರನ್.

ಈ ಮೂಲಕ ರವಿಚಂದ್ರನ್, ಡಾ.ರಾಜ್, ವಿಷ್ಣುವರ್ಧನ್, ಅಂಬರೀಷ್, ಶಿವರಾಜ್ ಕುಮಾರ್, ಲೀಲಾವತಿ ಮೊದಲಾದವರ ಸಾಲಿಗೆ ಸೇರಿದ್ದಾರೆ.