ಕೃಷ್ಣ ಟಾಕೀಸ್, ಅಜೇಯ್ ರಾವ್ ಅಭಿನಯದ ಹೊಸ ಸಿನಿಮಾ. ಈ ಸಿನಿಮಾಗಾಗಿ ನೈಟಿ ಮಾತ್ರ ಹಾಕ್ಕೊಬೇಡ ಮೇನಕಾ ಅನ್ನೋ ಐಟಂ ಸಾಂಗ್ ಚಿತ್ರೀಕರಣಗೊಂಡಿದೆ. ಅಜೇಯ್ ರಾವ್, ಲಾಸ್ಯ ನಾಗರಾಜ್, ಚಿಕ್ಕಣ್ಣ ಸೇರಿದಂತೆ 50ಕ್ಕೂ ಹೆಚ್ಚು ಕಲಾವಿದರು ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಅದೂ 3 ದಿನ.
ಮೋಹನ್ ಬಿ.ಕೆರೆ ಸ್ಟುಡಿಯೋದಲ್ಲಿ ಹಾಕಲಾಗಿದ್ದ ಸೆಟ್ಟಿನಲ್ಲಿ ಶೂಟಿಂಗ್ ಆಗಿದೆ. ಅಭಿಷೇಕ್ ಮತ್ತು ಪ್ರಮೋದ್ ಮರವಂತೆ ಹಾಡಿಗೆ ಸಾಹಿತ್ಯ ರಚಿಸಿದ್ದರೆ, ಶ್ರೀಧರ್ ಸಂಭ್ರಮ್ ಮ್ಯೂಸಿಕ್ ಇದೆ. ವಿಜಯಾನಂದ್ ನಿರ್ದೇಶನದ ಚಿತ್ರಕ್ಕೆ ಎ.ಎಚ್.ಗೋವಿಂದ ರಾಜು ನಿರ್ಮಾಪಕ