ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಕಣ್ಣಲ್ಲಿ ಏನೋ ಹೆಮ್ಮೆ.. ಸಂತೃಪ್ತಿ.. ಅಂಥಾದ್ದೊಂದು ಭಾವನೆ ಮೂಡಿಸಿರುವುದು ತೂಗುದೀಪ ಡೈನೆಸ್ಟಿ. ತೂಗುದೀಪ ಶ್ರೀನಿವಾಸ್ ಅವರಿಗಾಗಿಯೇ ಒಂದು ಆಲ್ಬಂ ಮಾಡಲಾಗಿದ್ದು, ಅದು ನಾಳೆ (ಅಕ್ಟೋಬರ್ 31) ರಿಲೀಸ್ ಆಗಲಿದೆ. ಅ ವಿಡಿಯೋ ಆಲ್ಬಂಗಾಗಿ ದರ್ಶನ್ ಮಾತನಾಡಿದ್ದಾರೆ. ಅಪ್ಪ ಇರಬೇಕಿತ್ತು ಎಂದು ನೆನಪಿಸಿಕೊಂಡಿದ್ದಾರೆ.
ನನ್ನ ತಂದೆ ಯಾವಾಗಲೂ ಒಂದು ಮಾತು ಹೇಳ್ತಾ ಇದ್ರು. ಕಲಾವಿದ ಯಾವತ್ತೂ ಕೂಡಾ ಹೊರಗಿನವರ ಸ್ವತ್ತು. ಆಮೇಲೆ ಆತ ಮನೆಯವರ ಆಸ್ತಿ ಎನ್ನುತ್ತಿದ್ದರು. ಈ ಅಕ್ಟೋಬರ್ 16ಕ್ಕೆ ತಂದೆ ದೂರವಾಗಿ 23 ವರ್ಷ. ಅವರು ಈಗಲೂ ಜೀವಂತವಾಗಿದ್ದಾರೆ ಅನ್ನೋದಕ್ಕೆ ಈ ಆಲ್ಬಂ ಸಾಕ್ಷಿ. ಅಪ್ಪ ಬದುಕಿದ್ದರೆ, ಈ ವಿಡಿಯೋ ನೋಡಿದ್ದರೆ ಖಂಡಿತಾ ಖುಷಿ ಪಡುತ್ತಿದ್ದರು ಎಂದಿದ್ದಾರೆ ದರ್ಶನ್. ಆಲ್ಬಂ ಮಾಡಿದ ತೂಗುದೀಪ ಡೈನೆಸ್ಟಿ ಸದಸ್ಯರಿಗೆ ಧನ್ಯವಾದ ಹೇಳಿದ್ದಾರೆ.