Print 
shivarajkumar, praneetha,

User Rating: 0 / 5

Star inactiveStar inactiveStar inactiveStar inactiveStar inactive
 
praneetha to pair opposite shivanna
Praneetha Subash, Shivarajkumar

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ಮತ್ತೊಮ್ಮೆ ಪ್ರಣೀತಾ ಸುಭಾಷ್ ಒಂದಾಗುತ್ತಿದ್ದಾರೆ. ಈ ಹಿಂದೆ ಮಾಸ್ ಲೀಡರ್ ಚಿತ್ರದಲ್ಲಿ ಶಿವಣ್ಣನ ಪತ್ನಿಯಾಗಿ ನಟಿಸಿದ್ದ ಪ್ರಣೀತಾ, ಈ ಬಾರಿ ಬೋಲ್ಡ್ & ಬಬ್ಲಿ ಕ್ಯಾರೆಕ್ಟರ್ ಮಾಡುತ್ತಿದ್ದಾರೆ. ಸತ್ಯಜ್ಯೋತಿ ಬ್ಯಾನರ್, ಮತ್ತೊಮ್ಮೆ ಕನ್ನಡಕ್ಕೆ ಬರುತ್ತಿದೆ ಎಂಬ ಸುದ್ದಿಯನ್ನು ಓದಿದ್ದಿರಷ್ಟೇ.. ಆ ಸಂಸ್ಥೆಯ ಚಿತ್ರದಲ್ಲೇ ಶಿವಣ್ಣ ಎದುರು ಪ್ರಣೀತಾ ಹೀರೋಯಿನ್.

ಶಿವರಾಜ್ ಕುಮಾರ್ ಈ ಚಿತ್ರದಲ್ಲಿ ಮತ್ತೊಮ್ಮೆ ಖಾಕಿಧಾರಿಯಾಗಿದ್ದು, ರವಿ ಅರಸು ನಿರ್ದೇಶಕ. ಟಿಜಿ ತ್ಯಾಗರಾಜನ್ ನಿರ್ಮಾಣದ ಚಿತ್ರಕ್ಕೆ ಉಳಿದ ತಂತ್ರಜ್ಞರು, ಕಲಾವಿದರ ಆಯ್ಕೆ ಇನ್ನಷ್ಟೇ ಆಗಬೇಕಿದೆ.