ಶಿವರಾಜ್ ಕುಮಾರ್, ರಚಿತಾ ರಾಮ್, ಅನಂತ ನಾಗ್, ಸುಹಾಸಿನಿ, ನಿಧಿ ಸುಬ್ಬಯ್ಯ ಅಭಿನಯದ ಆಯುಷ್ಮಾನ್ ಭವ ಇನ್ನೇನು ಕೆಲವೇ ದಿನಗಳಲ್ಲಿ ರಿಲೀಸ್. ರಾಜ್ಯೋತ್ಸವಕ್ಕೆ ಪ್ರೇಕ್ಷಕ ಪ್ರಭುಗಳ ಮಂದೆ ಬರ್ತಿರೋ ಚಿತ್ರದ ಟ್ರೇಲರ್ ಹೊರಬಿದ್ದಿದೆ. ಆದರೆ, ಟ್ರೇಲರ್ ಎಷ್ಟು ಸಸ್ಪೆನ್ಸ್ ತುಂಬಿಕೊಂಡಿದೆಯೆಂದರೆ ಕಥೆಯ ಎಳೆ ಹೀಗಿರಬಹುದಾ ಎಂಬ ಸಣ್ಣ ಸುಳಿವನ್ನೂ ಬಿಟ್ಟುಕೊಟ್ಟಿಲ್ಲ.
ನಿರ್ದೇಶಕ ಪಿ.ವಾಸು ಮತ್ತೊಮ್ಮೆ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲಿ ಸೈಕಲಾಜಿಕಲ್ ಕಥೆ ಇದೆಯಾ..? ಟ್ರೇಲರ್ ಏನೆಂದರೆ ಏನೂ ಗುಟ್ಟು ಬಿಟ್ಟುಕೊಡಲ್ಲ. ಒಂದು ತುಂಬು ಸಂಸಾರ, ಅಲ್ಲೇನೋ ಒಂದು ನಿಗೂಢತೆ ಇದೆ. ಟ್ರೇಲರ್ ಹೇಳುವುದು ಇಷ್ಟೆ. ಉಳಿದಂತೆ ಒಂದೊಂದೇ ಸೀನ್‍ನಲ್ಲಿ ಎಲ್ಲರೂ ಕುತೂಹಲ ಹುಟ್ಟಿಸುತ್ತಾರೆ.
ದ್ವಾರಕೀಶ್ ಬ್ಯಾನರ್‍ನ 52ನೇ ಸಿನಿಮಾ, ಗುರುಕಿರಣ್ ಸಂಗೀತ ನಿರ್ದೇಶನದ 100ನೇ ಸಿನಿಮಾ ಅಯುಷ್ಮಾನ್ ಭವ. ಶಿವಣ್ಣ ಚಿತ್ರದ ಮ್ಯೂಸಿಷಿಯನ್ ಆಗಿದ್ದಾರಾ..? ಊಹೂಂ.. ಅದೂ ಗೊತ್ತಾಗಲ್ಲ. ಕಾಯಬೇಕಷ್ಟೆ..