ಸೀರೆ ಎಂದರೆ ಸಾಕು..ಸ್ವಾಭಿಮಾನ ಚಿತ್ರದ ದೂರದ ಊರಿಂದ ಹಮ್ಮೀರ ಬಂದ.. ಮಿ.ರಾಜಾ ಚಿತ್ರದ ಸೀರೆ ಕೊಟ್ಟ ಧೀರ..ಜನುಮದ ಜೋಡಿ ಚಿತ್ರದ ಸೀರೆ..ಸೀರೆ..ಸೀರೆ..ಎಲ್ಲೆಲ್ಲೋ ಹಾರೈತೆ..ಮಿಡಿದ ಹೃದಯಗಳು ಚಿತ್ರದ ತಂದೆ ಕೊಡಿಸೋ ಸೀರೆ..ಪಂಚರಂಗಿ ಚಿತ್ರದ ಉಡಿಸುವೆ ಬೆಳಕಿನ ಸೀರೆಯಾ..ರನ್ನ ಚಿತ್ರದ ಸೀರೆಲಿ ಹುಡುಗಿಯ ನೋಡಲೆಬಾರದು..
ಸೇರಿದಂತೆ ಹತ್ತಾರು ಹಾಡುಗಳು.. ಸೀರೆ ತೊಟ್ಟವರೂ ನೆನಪಾಗ್ತಾರೆ. ಅಂದಹಾಗೆ ಈ ಮೇಲೆ ಹೇಳಿದ ಹಾಡುಗಳಲ್ಲಿ ಪಂಚರಂಗಿಯ ಬೆಳಕಿನ ಸೀರೆ ಹಾಗೂ ರನ್ನನ ಸೀರೆಲಿ ಹುಡುಗಿಯ.. ಹಾಡುಗಳ ಸೃಷ್ಟಿಕರ್ತ ಯೋಗರಾಜ್ ಭಟ್ಟರೇ. ಅದೇಕೋ ಏನೋ.. ಭಟ್ಟರು ಸೀರೆಯ ಬೆನ್ನು ಬಿದ್ದಿದ್ದಾರೆ.
ಸೀರೆ ಅನ್ನೋದು ಯೋಗರಾಜ್ ಭಟ್ಟರ ಹೊಸ ಸಿನಿಮಾದ ಟೈಟಲ್ಲು. ಹಾಗಂತ ಅವರು ನಿರ್ದೇಶನ ಮಾಡ್ತಿಲ್ಲ. ಭಟ್ಟರು ಮತ್ತು ಶಶಾಂಕ್ ಒಟ್ಟಿಗೇ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ಭಟ್ಟರ ಶಿಷ್ಯ ಮೋಹನ್ ಸಿಂಗ್ ನಿರ್ದೇಶಕ.
ನಟ ರಿಷಿಗಾಗಿ ಒಂದೊಳ್ಳೆ ಕಥೆಯ ಹುಡುಕಾಟದಲ್ಲಿದ್ದ ಭಟ್ಟರು, ಕಥೆಯನ್ನು ಶಶಾಂಕ್ ಅವರಿಗೆ ಹೇಳಿದ್ದಾರೆ. ಶಶಾಂಕ್ ಅವರಿಗೂ ಕಥೆ ಇಷ್ಟವಾಗಿದೆ. ಗಾಳಿಪಟ 2ನಲ್ಲಿ ರಿಷಿ ನಟಿಸಬೇಕಿತ್ತು. ನಂತರ ಬದಲಾವಣೆಯಾಗಿತ್ತು. ರಿಷಿಗಾಗಿ ಬೇರೊಂದು ಸಿನಿಮಾ ಮಾಡುತ್ತೇನೆ ಎಂದಿದ್ದ ಭಟ್ಟರು, ಸ್ವತಃ ತಾವೇ ನಿರ್ಮಾಪಕರಾಗಿದ್ದಾರೆ. ಜೊತೆಯಲ್ಲಿ ಶಶಾಂಕ್ ಇದ್ದಾರೆ. ಭಟ್ಟರ ಗ್ಯಾಂಗಿನ ಮಾಸ್ತಿ ಡೈಲಾಗ್ ಬರೆಯುತ್ತಿದ್ದಾರೆ.