` ಭರ ಭರ ಭರಾಟೆ ಗೆಲುವು : ಅಭಿಮಾನಿಗಳಿಗೆ ಶ್ರೀಮುರಳಿ ಧನ್ಯವಾದ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
bharaate success team
Bharaate Movie Image

ಶ್ರೀಮುರಳಿ, ಶ್ರೀಲೀಲಾ, ಭರ್ಜರಿ ಚೇತನ್, ಸಾಯಿ ಬ್ರದರ್ಸ್ ಕಾಂಬಿನೇಷನ್  ಭರ್ಜರಿಯಾಗಿಯೇ ಗೆದ್ದಿದೆ. ರಿಲೀಸ್ ಆದ 250ಕ್ಕೂ ಹೆಚ್ಚು ಸೆಂಟರ್‍ಗಳಲ್ಲಿ ಹೌಸ್‍ಫುಲ್ ಶೋ. ಅಭಿಮಾನಿಗಳ ಪ್ರೀತಿಗೆ ಸಿಕ್ಕ ಗೆಲುವಿಗೆ ಇಡೀ ತಂಡ ಫುಲ್ ಹ್ಯಾಪಿ. ಈ ಗೆಲುವು ಅಭಿಮಾನಿಗಳಿಗೆ ಅರ್ಪಣೆ ಎಂದಿರುವ ಶ್ರೀಮುರಳಿ, ಹೊಸ ಪ್ರಾಜೆಕ್ಟ್‍ನತ್ತ ಮುಖ ಮಾಡಿದ್ದಾರೆ.

ನಿರ್ಮಾಪಕ ಸುಪ್ರೀತ್ ಮೊದಲ ಪ್ರಯತ್ನದಲ್ಲೇ ಗೆದ್ದ ಖುಷಿಯಲ್ಲಿದ್ದಾರೆ. ಸಾಯಿಕುಮಾರ್ ಅವರಿಗಂತೂ ಡಬಲ್ ಖುಷಿ. ಸೋದರರ ಜೊತೆ ನಟಿಸಿದ್ದ ಖುಷಿಯನ್ನು ಭರಾಟೆ ಭರಪೂರವಾಗಿ ಕೊಟ್ಟಿತ್ತು. ಈಗ ಸಿಕ್ಕಿರುವ ಗೆಲುವು ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದೆ ಎಂದಿದ್ದಾರೆ ಸಾಯಿಕುಮಾರ್.

ನಿರ್ದೇಶಕ ಚೇತನ್ ಕುಮಾರ್ ಆಗಲೇ ಜೇಮ್ಸ್ ಚಿತ್ರವನ್ನು ಶುರು ಮಾಡುವ ಉತ್ಸಾಹದಲ್ಲಿದ್ದಾರೆ. ಪುನೀತ್ ಜೊತೆಗಿನ ಮುಂದಿನ ಚಿತ್ರ ಆರಂಭಿಸುವ ಹೊತ್ತಿಗೆ ಸಿಕ್ಕಿರುವ ಭರಾಟೆ ಬೂಸ್ಟ್, ಚೇತನ್ ಉತ್ಸಾಹವನ್ನು ಇನ್ನಷ್ಟು ಹೆಚ್ಚಿಸಿದೆ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery