` ಕೆಜಿಎಫ್ 2 ಬಂದ್ರೆ, ಚಾಪ್ಟರ್ 1 ಸಣ್ಣದು ಎನಿಸುತ್ತೆ - ಯಶ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
yash speaks about kgf chapter 2
Yash

ಕೆಜಿಎಫ್ ಚಾಪ್ಟರ್ 2 ಏನಾಗಿದೆ..? ಏನಾಗ್ತಾ ಇದೆ..? ಶೂಟಿಂಗ್ ಎಲ್ಲಿಗೆ ಬಂದಿದೆ..? ಏಕೆ ಕೆಜಿಎಫ್ 2 ಬಗ್ಗೆ ಯಾರೂ ಏನನ್ನೂ ಮಾತಾಡ್ತಾ ಇಲ್ಲ..? ಏಕೆ..? ಏನು..? ಎಲ್ಲಿ..? ಹೇಗೆ..? ಯಾವಾಗ..? ಹೀಗೆ ಕೆಜಿಎಫ್ ಟೀಂಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸ್ತಿದ್ದರೂ, ಚಾಪ್ಟರ್ 2 ಟೀಂನವರು ಅಭಿಮಾನಿಗಳ ಎಲ್ಲ ಕುತೂಹಲವನ್ನೂ ತಣಿಸುತ್ತಿಲ್ಲ. ಈಗ ಯಶ್ ಅವರೇ ಮಾತನಾಡಿದ್ದಾರೆ. ಕೆಜಿಎಫ್ ಚಾಪ್ಟರ್ 2 ನಿರೀಕ್ಷೆ ಮತ್ತು ಕೆಜಿಎಫ್ ವೇಳೆ ಎದುರಿಸಿದ ಸವಾಲು ಎರಡಕ್ಕೂ ಉತ್ತರ ಕೊಟ್ಟಿದ್ದಾರೆ.

ಕೆಜಿಎಫ್ ಚಾಪ್ಟರ್ 2 ತೆರೆಗೆ ಬಂದ್ರೆ, ಚಾಪ್ಟರ್ 1 ತುಂಬಾ ಸಣ್ಣದು ಎನಿಸಿಬಿಡುತ್ತೆ. ಜನರ ನಂಬಿಕೆ, ನಿರೀಕ್ಷೆಗೆ ತಕ್ಕಂತೆ ವಿಜಯ್ ಕಿರಗಂದೂರು, ಪ್ರಶಾಂತ್ ನೀಲ್ ಕೆಲಸ ಮಾಡುತ್ತಿದ್ದಾರೆ. ಒಬ್ಬ ನಟನಾಗಿ ನಾನೇನು ಮಾಡಬೇಕೋ ಮಾಡ್ತಿದ್ದೀನಿ ಎಂದಿದ್ದಾರೆ ಯಶ್.

ಕೆಜಿಎಫ್ ಮುಗಿಯುವವರೆಗೆ ಬೇರೆ ಯಾವುದೇ ಸಿನಿಮಾ ಒಪ್ಪಿಕೊಂಡಿಲ್ಲ. ಅಲ್ಲಿ ಇಲ್ಲಿ ಬಂದ ಸುದ್ದಿಗಳನ್ನೆಲ್ಲ ನಂಬಬೇಡಿ. ಯಾವುದಾದರೂ ಫೈನಲ್ ಆದರೆ, ನಾನೇ ಬಹಿರಂಗಪಡಿಸುತ್ತೇನೆ. ಚಾಪ್ಟರ್ 2 ಚೆನ್ನಾಗಿ ಬರಬೇಕು ಎನ್ನುವ ಕಾರಣಕ್ಕೆ ನಾನು ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. ಸಂಪೂರ್ಣವಾಗಿ ಕೆಜಿಎಫ್‍ನಲ್ಲೇ ಮುಳುಗಿದ್ದೇನೆ ಎಂದಿದ್ದಾರೆ ಯಶ್.

Kaalidasa Kannada Mestru Movie Gallery

Kabza Movie Launch Gallery