ಆಯುಷ್ಮಾನ್ ಭವ, ಇದೇ ನವೆಂಬರ್ 1ಕ್ಕೆ ರಿಲೀಸ್ ಆಗುತ್ತಿರುವ ಚಿತ್ರ. ವಿಶೇಷವೆಂದರೆ ಈ ಚಿತ್ರದಲ್ಲಿರುವ ಬಹುತೇಕರು ದಿಗ್ಗಜರೇ. ಅದು ಆಡಿಯೋ ಲಾಂಚ್ ಕಾರ್ಯಕ್ರಮದಲ್ಲೂ ಸಾಬೀತಾಯ್ತು.
ಇದು ದ್ವಾರಕೀಶ್ ಚಿತ್ರದ 52ನೇ ಸಿನಿಮಾ. ಅದೂ ದ್ವಾರಕೀಶ್ ಬ್ಯಾನರ್ಗೆ 50ನೇ ವರ್ಷ ತುಂಬಿರುವ ಗೋಲ್ಡನ್ ಜ್ಯುಬಿಲಿ ವೇಳೆ ಬರುತ್ತಿರುವ ಚಿತ್ರವಿದು. ನಿರ್ಮಾಪಕ ದ್ವಾರಕೀಶ್.
ಶಿವರಾಜ್ ಕುಮಾರ್ ಹೀರೋ ಆಗಿರುವ ಚಿತ್ರಕ್ಕೆ ಪಿ.ವಾಸು ನಿರ್ದೇಶನವಿದೆ. ಜೊತೆಯಲ್ಲಿ ಚಿತ್ರದಲ್ಲಿ ಅನಂತ್ ನಾಗ್, ಸುಹಾಸಿನಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ರಚಿತಾ ರಾಮ್ ನಾಯಕಿ. ಹೀಗೆ ದಿಗ್ಗಜರೇ ತುಂಬಿಕೊಂಡಿರುವ ಚಿತ್ರದ ಆಡಿಯೋ ಲಾಂಚ್ ಕಾರ್ಯಕ್ರಮಕ್ಕೆ ಬಂದವರು ಕೂಡಾ ದಿಗ್ಗಜರೇ. ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತು ರಿಯಲ್ ಸ್ಟಾರ್ ಉಪೇಂದ್ರ.
ಅಂದಹಾಗೆ ಈ ಚಿತ್ರದ ಮೂಲಕ 100 ಚಿತ್ರಗಳಿಗೆ ಸಂಗೀತ ನಿರ್ದೇಶನ ಪೂರೈಸಿರುವ ಗುರುಕಿರಣ್ ಕೂಡಾ ಈಗ ದಿಗ್ಗಜರ ಸಾಲಿಗೇ ಸೇರಿಬಿಟ್ಟರು. ಇನ್ನೊಂದು ವಿಶೇಷವೆಂದರೆ, ಈ ದಿಗ್ಗಜರನ್ನೆಲ್ಲ ಒಂದೇ ವೇದಿಕೆಯಲ್ಲಿ ಸೇರುವಂತೆ ಮಾಡಿದ್ದು ಯೋಗೀಶ್ ದ್ವಾರಕೀಶ್.