` ಭರಾಟೆ ಸಸ್ಪೆನ್ಸ್ ಔಟ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
bharaate suspense revealed
Bharaate Movie Image

ಭರಾಟೆ ಚಿತ್ರದಲ್ಲೊಂದು ಸಸ್ಪೆನ್ಸ್ ಥ್ರಿಲ್ ಇದೆ. ಅದು ಯಾವುದು ಎಂದು ನೀವೇ ನೋಡಿ. ಆ ಪಾತ್ರ ಇಡೀ ಚಿತ್ರಕ್ಕೊಂದು ದೈವಿಕ ಕಳೆ ತರಲಿದೆ. ಆ ಹೀರೋಗೆ ನೀವು ಫಿದಾ ಆಗ್ತೀರಿ ಎಂದು ತಲೆಗೆ ಹುಳ ಬಿಟ್ಟಿದ್ದರು ನಿರ್ದೇಶಕ ಚೇತನ್.

ಆ ನಟ ಇರಬಹುದಾ..? ಈ ಹೀರೋ ಇರಬಹುದಾ..? ಎಂದು ಪ್ರೇಕ್ಷಕರೂ ಸಿಕ್ಕಾಪಟ್ಟೆ ತಲೆಕೆಡಿಸಿಕೊಂಡಿದ್ದರು. ಹಾಗೆ ತಲೆಕೆಡಿಸಿಕೊಂಡಿದ್ದವರಿಗೆಲ್ಲ ಹಿತವಾದ ಶಾಕ್ ಕೊಟ್ಟಿದ್ದಾರೆ ಚೇತನ್. ಆ ಸಸ್ಪೆನ್ಸ್ ಹೀರೋ ಯಾರೂ ಅಲ್ಲ... ಸಾಕ್ಷಾತ್ ಶ್ರೀಮುರಳಿಯೇ.

ರೋರಿಂಗ್ ಸ್ಟಾರ್ ಆಗಿ ಇಡೀ ಚಿತ್ರದಲ್ಲಿ ಅಬ್ಬರಿಸಿ..ಬೊಬ್ಬಿರಿದು.. ನಕ್ಕು ನಗಿಸಿ.. ಕಣ್ಣೀರು ಸುರಿಸಿ ಮನಗೆದ್ದಿರುವ ಶ್ರೀಮುರಳಿ, ಈ ಚಿತ್ರದಲ್ಲಿ ಡಬಲ್ ಆಕ್ಟಿಂಗ್ ಮಾಡಿದ್ದಾರೆ. ರತ್ನಾಕರ ಎಂಬ ತಾತನ ಪಾತ್ರದಲ್ಲೂ ಮಿಂಚಿದ್ದಾರೆ ಶ್ರೀಮುರಳಿ. ಶ್ರೀಮುರಳಿಯ ದ್ವಿಪಾತ್ರಕ್ಕೆ ಫಿದಾ ಆಗಿರುವುದು ಪ್ರೇಕ್ಷಕ. ಸಿನಿಮಾಗೆ ಬರುತ್ತಿರೋ ರಿಪೋರ್ಟ್ ನೋಡಿ ಖುಷ್ ಆಗಿರುವುದು ನಿರ್ಮಾಪಕ ಸುಪ್ರೀತ್.

Ayushmanbhava Movie Gallery

Damayanthi Audio and Trailer Launch Gallery