` ಆ ಮೂವರ ಜೊತೆ ನಟಿಸಬೇಕು - ವಸಿಷ್ಠ ಸಿಂಹ ಕನಸು - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
vasstha simha's dream is to act with sudeep, darshan and puneeth
Vasistha Simha

ಕಂಚಿನ ಕಂಠ.. ಕೆಂಡ ಉಗುಳುವ ಕಣ್ಣು.. ಅಭಿನಯದಲ್ಲೂ ಅದ್ಭುತ.. ಈ ಎಲ್ಲವುಗಳ ಕೊಲಾಜ್ ಆಗಿರುವ ವಸಿಷ್ಠ ಸಿಂಹ ಕನ್ನಡ ಚಿತ್ರರಂಗದಲ್ಲೀಗ ಒಳ್ಳೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಒಳ್ಳೆಯ ಗಾಯಕರು ಆಗಿರುವ ವಸಿಷ್ಠ ಸಿಂಹ ಈಗ ಕಾಲಚಕ್ರ ಚಿತ್ರದಲ್ಲಿ ಹೀರೋ ಕೂಡಾ ಹೌದು. ಕಾಲಚಕ್ರ ಚಿತ್ರದ ಟೀಸರ್ ರಿಲೀಸ್ ಮಾಡಿ ವಸಿಷ್ಠ ಸಿಂಹರ ಆ್ಯಂಗ್ರಿ ಲುಕ್‍ನ್ನು ಹೊಗಳಿದ್ದು ಕಿಚ್ಚ ಸುದೀಪ್.

ಈ ವೇಳೆಯಲ್ಲಿಯೇ ವಸಿಷ್ಠ ಸಿಂಹ ತಮ್ಮ ಕನಸು ಬಿಚ್ಚಿಟ್ಟಿದ್ದಾರೆ. `ಈಗಾಗಲೇ ಶಿವಣ್ಣ, ಯಶ್, ಗಣೇಶ್, ಶ್ರೀಮುರಳಿ, ಜಗ್ಗೇಶ್.. ಮೊದಲಾದವರ ಜೊತೆ ನಟಿಸಿದ್ದೇನೆ. ಆದರೆ, ಇದುವರೆಗೆ ಪುನೀತ್, ಸುದೀಪ್ ಮತ್ತು ದರ್ಶನ್ ಎದುರು ನಟಿಸಿಲ್ಲ. ಈ ಮೂವರ ಎದುರು ನಟಿಸಬೇಕು ಎನ್ನುವ ಕನಸಿದೆ. ಸದ್ಯಕ್ಕೆ ಪುನೀತ್ ರಾಜ್‍ಕುಮಾರ್ ಅವರ ಬ್ಯಾನರ್‍ನಲ್ಲಿ ಮಾಯಾಬಜಾರ್ ಚಿತ್ರದಲ್ಲಿ ನಟಿಸಿದ್ದೇನೆ. ಆದರೂ.. ಪುನೀತ್ ಎದುರು ನಟಿಸಬೇಕು'' ಎಂದು ಹೇಳಿಕೊಂಡಿದ್ದಾರೆ ವಸಿಷ್ಠ ಸಿಂಹ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery