ಪಿ.ವಾಸು ಸೈಕಲಾಜಿಕಲ್ ಥ್ರಿಲ್ಲರ್ ಚಿತ್ರಗಳಿಗೆ ಫೇಮಸ್. ದೆವ್ವಗಳನ್ನೂ ಬಿಟ್ಟಿಲ್ಲ. ವಿಷ್ಣುಗೆ ಆಪ್ತಮಿತ್ರದಂತ ಸೈಕಲಾಜಿಕಲ್ ಥ್ರಿಲ್ಲರ್, ಆಪ್ತರಕ್ಷಕದಲ್ಲಿ ರಿಯಲ್ ದೆವ್ವದ ಚಿತ್ರ ಕೊಟ್ಟಿದ್ದ ಪಿ.ವಾಸು, ಶಿವರಾಜ್ ಕುಮಾರ್ ಅವರಿಗೆ ಶಿವಲಿಂಗ ಎಂಬ ದೆವ್ವದಂತಾ ಹಿಟ್ ಕೊಟ್ಟಿದ್ದವರು. ಈಗ ಆಯುಷ್ಮಾನ್ ಭವ ಟೀಸರ್ ಹೊರಬಿದ್ದಿದೆ. ದೆವ್ವ ಇದೆಯಾ..? ಅಥವಾ ಸೈಕಲಾಜಿಕಲ್ ಥ್ರಿಲ್ಲರ್ ಕಥೆಯಾ..? ಕುತೂಹಲ ಹುಟ್ಟಿಸುವಲ್ಲಿ ಗೆದ್ದಿದೆ ಆಯುಷ್ಮಾನ್ ಭವ ಟೀಸರ್.
ನೀನ್ ಶಬ್ಧಾನಾ ಇಷ್ಟ ಪಡ್ತಿದ್ದೀಯ ಅಂದ್ರೆ, ನಿನ್ನ ದೇಹದಲ್ಲಿ ತಾಳ ಇನ್ನೂ ಇದೆ ಎಂದಾಯ್ತು ಅನ್ನೋ ಡೈಲಾಗ್, ಇದು ಸೈಕಲಾಜಿಕಲ್ ಥ್ರಿಲ್ಲರ್ ಇರಬಹುದಾ ಎನ್ನಿಸಿದ್ರೆ, ರಚಿತಾ ರಾಮ್ ಅವರ ಲುಕ್ ಬೇರೇನೋ ಕಥೆ ಹೇಳುತ್ತೆ. ಒಂದು ಎನರ್ಜೆಟಿಕ್ ಆ್ಯಕ್ಷನ್ ಮತ್ತು ಪಿ.ವಾಸು ಅವರ ಇಷ್ಟದ ಟ್ರೈನ್ ಪ್ರತ್ಯಕ್ಷವಾಗುತ್ತೆ.
ಯೋಗಿ ದ್ವಾರಕೀಶ್ ನಿರ್ಮಾಣದಲ್ಲಿ ಬರುತ್ತಿರೋ ಚಿತ್ರದಲ್ಲಿ ಅನಂತ್ ನಾಗ್, ಸುಹಾಸಿನಿ, ನಿಧಿ ಸುಬ್ಬಯ್ಯ, ಸುಧಾ ಬೆಳವಾಡಿ, ಜೈಜಗದೀಶ್, ಶಿವಾಜಿಪ್ರಭು ನಟಿಸಿದ್ದಾರೆ.