` ರಂಗನಾಯಕಿ : ಮಹಿಳೆಯರಿಗಾಗಿಯೇ ಸ್ಪೆಷಲ್ ಶೋ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ranganayaki special show for women
Ranganayaki Movie Image

ದಯಾಳ್ ಪದ್ಮನಾಭ್ ನಿರ್ದೇಶನದ ರಂಗನಾಯಕಿ ಚಿತ್ರದಲ್ಲಿರೋದು ಅತ್ಯಾಚಾರಕ್ಕೊಳಗಾದ ಮಹಿಳೆ, ನ್ಯಾಯಕ್ಕಾಗಿ ಕಾನೂನಿನ ಚೌಕಟ್ಟಿನಲ್ಲಿಯೇ ಹೋರಾಡುವ ಕಥೆ. ಆದಿತಿ ಪ್ರಭುದೇವ ನಟಿಸಿರುವ ಕಥೆಯ ಕೇಂದ್ರ ಬಿಂದು ಮಹಿಳೆ.

ಕೆಲವು ವರ್ಷಗಳ ಹಿಂದೆ ದೆಹಲಿಯಲ್ಲಿ ನಡೆದಿದ್ದ ನಿರ್ಭಯಾ ಪ್ರಕರಣವೇ ಇದಕ್ಕೆ ಪ್ರೇರಣೆ. ಆ ನಿರ್ಭಯಾ ಬದುಕಿದ್ದರೆ ಏನು ಮಾಡುತ್ತಿದ್ದಳು.. ನ್ಯಾಯಕ್ಕಾಗಿ ಹೇಗೆಲ್ಲ ಹೋರಾಡಬೇಕಿತ್ತು ಎಂಬ ಕಲ್ಪನೆಯಲ್ಲಿ ಅರಳಿರುವ ಕಥೆಯೇ ರಂಗನಾಯಕಿ. ಹೀಗಾಗಿ ಈ ಚಿತ್ರದ ವಿಶೇಷ ಪ್ರದರ್ಶನವೊಂದನ್ನು ಮಹಿಳೆಯರಿಗಾಗಿಯೇ ಏರ್ಪಡಿಸಲಿದ್ದೇವೆ ಎಂದಿದ್ದಾರೆ ದಯಾಳ್.

ಎಸ್.ವಿ.ನಾರಾಯಣ್ ನಿರ್ಮಾಣದ ಚಿತ್ರ ನವೆಂಬರ್ ರಾಜ್ಯೋತ್ಸವಕ್ಕಾಗಿಯೇ ರಿಲೀಸ್ ಆಗುತ್ತಿದೆ. ಬ್ರಿಡ್ಜ್ ಚಿತ್ರಗಳ ಎಕ್ಸ್‍ಪರ್ಟ್ ಆಗಿರುವ ದಯಾಳ್ ಅವರ ರಂಗನಾಯಕಿ ಇದೇ ಕಾರಣಕ್ಕೆ ಕುತೂಹಲ ಕೆರಳಿಸಿದೆ.

Kaalidasa Kannada Mestru Movie Gallery

Kabza Movie Launch Gallery