` ಗಣೇಶ್ ಸೋದರನಿಗೆ ರವಿಚಂದ್ರನ್ ಚಿತ್ರದ ಟೈಟಲ್ - chitraloka.com | Kannada Movie News, Reviews | Image

User Rating: 0 / 5

Star inactiveStar inactiveStar inactiveStar inactiveStar inactive
 
ganesh's brother gets ravichandran movie title
Suraj Krishna, Ganesh

ಗೋಲ್ಡನ್ ಸ್ಟಾರ್ ಗಣೇಶ್ ಅವರ ಇನ್ನೊಬ್ಬ ಸಹೋದರನ ಸಿನಿಮಾ ರಂಗ ಪ್ರವೇಶವಾಗಿದೆ. ಈಗಾಗಲೇ ಮಹೇಶ್ ಎಂಬ ಗಣೇಶ್ ಅವರ ಸೋದರ ಹೀರೋ ಆಗಿ ಬಂದಿದ್ದಾಗಿದೆ. ಈಗ ಮತ್ತೊಬ್ಬ ಸೋದರ ಸೂರಜ್ ಕೃಷ್ಣ ಚಿತ್ರರಂಗಕ್ಕೆ ಬಂದಿದ್ದಾರೆ. ಭಾರ್ಗವ ಅವರ ಶಿಷ್ಯ ಶ್ರೀನಿವಾಸ್ ಶಿವಾರ ನಿರ್ದೇಶನದ ಚಿತ್ರದಲ್ಲಿ ಸೂರಜ್ ಹೀರೋ. ಚಿತ್ರದ ಹೆಸರು ನಾನೇ ರಾಜ.

ನಾನೇ ರಾಜ, ರವಿಚಂದ್ರನ್ ಆರಂಭಿಕ ದಿನಗಳಲ್ಲಿ ನಟಿಸಿದ್ದ ಕನ್ನಡ ಸಿನಿಮಾ. ರವಿಚಂದ್ರನ್, ಅಂಬಿಕಾ, ಅಂಬರೀಷ್ ನಟಿಸಿದ್ದ ಚಿತ್ರವದು. 1984ರಲ್ಲಿ ತೆರೆ ಕಂಡಿದ್ದ ಸಿನಿಮಾ. ಈಗ ಆ ಟೈಟಲ್ ಸಿನಿಮಾದಲ್ಲಿ ಗಣೇಶ್ ಸೋದರ ಸೂರಜ್ ನಟಿಸುತ್ತಿದ್ದಾರೆ. ಸೋನಿಕಾ ಗೌಡ ನಾಯಕಿಯಾಗಿದ್ದು, ಇದೊಂದು ಪಕ್ಕಾ ಹಳ್ಳಿ ಸ್ಟೋರಿ ಎನ್ನಲಾಗಿದೆ.

Kaalidasa Kannada Mestru Movie Gallery

Kabza Movie Launch Gallery