ರಿಷಬ್ ಶೆಟ್ಟಿ ರುದ್ರಪ್ರಯಾಗ ಸಿನಿಮಾ ಮಾಡ್ತಿರೋದು ಹಾಗೂ ಆ ಚಿತ್ರದಲ್ಲಿ ಶ್ರದ್ಧಾ ಶ್ರೀನಾಥ್ ನಟಿಸುತ್ತಿರುವುದು ಗೊತ್ತಿದೆ ತಾನೇ. ಜಯಣ್ಣ ಕಂಬೈನ್ಸ್‍ನ ಈ ಚಿತ್ರದಲ್ಲಿ ಶ್ರದ್ಧಾ ಅವರ ರೋಲ್ ಏನು ಎನ್ನುವ ವಿಷಯ ಈಗ ಬಹಿರಂಗವಾಗಿದೆ. ಚಿತ್ರದಲ್ಲಿ ಶ್ರದ್ಧಾ ಅರಣ್ಯಾಧಿಕಾರಿಯಾಗಿ ನಟಿಸಲಿದ್ದಾರಂತೆ.
ವಿಕ್ರಂವೇದ, ಜೆರ್ಸಿ ಚಿತ್ರಗಳಲ್ಲಿ ಗಟ್ಟಿ ಪಾತ್ರಗಳ ಮೂಲಕ ಗಮನ ಸೆಳೆದಿದ್ದ ಶ್ರದ್ದಾ, ರುಸ್ತುಂನಲ್ಲಿ ಪೊಲೀಸ್ ಆಫೀಸರ್ ಪತ್ನಿಯಾಗಿ ಮಿಂಚಿದ್ದರು. ಈಗ ಸ್ವತಃ ತಾವೇ ಖಾಕಿಧಾರಿಯಾಗುತ್ತಿದ್ದಾರೆ.