` ಕಿರುತೆರೆಯಲ್ಲಿ ಜೊತೆ ಜೊತೆಯಲಿ ದಾಖಲೆ : TRP ಎಷ್ಟು ಗೊತ್ತೇ..? - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
jothe jothyali serial creates record
Jothe Jotheyali Serial

ಜೊತೆ ಜೊತೆಯಲಿ, ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಮೆಗಾ ಸೀರಿಯಲ್. ಸೀರಿಯಲ್ ಶುರುವಾಗಿ ತಿಂಗಳಷ್ಟೆ ಆಗಿದೆ. ಆದರೆ, ಟಿವಿ ವೀಕ್ಷಕರ ಮನಸ್ಸು ಗೆದ್ದಿರುವ ಧಾರಾವಾಹಿ, ಟಿಆರ್‍ಪಿಯಲ್ಲಿ ಹೊಸ ದಾಖಲೆಯನ್ನೇ ಬರೆದಿದೆ.

ಸೀರಿಯಲ್ ಹೀರೋ ಆನಿರುದ್ಧ, ಈಗ ಕಿರುತೆರೆಯ ಹೀರೋ ನಂ.1. ಉದ್ಯಮಿ ಆರ್ಯವರ್ಧನ್ ಆಗಿ ಗೆದ್ದಿದ್ದಾರೆ ಅನಿರುದ್ಧ. ಇನ್ನು ಮೇಘಾಶೆಟ್ಟಿ ಧಾರಾವಾಹಿಯ ನಾಯಕಿ ಅನು ಸಿರಿಮನೆ ಪಾತ್ರಧಾರಿ. ಸದ್ಯಕ್ಕೆ ಕಿರುತೆರೆಯ ಸ್ಟಾರ್ ನಂ.1. ಧಾರಾವಾಹಿಯ ನಿರ್ದೇಶಕ ಆರೂರು ಜಗದೀಶ್.

ಅದ್ಧೂರಿಯಾಗಿ ಬರುತ್ತಿರುವ ಧಾರಾವಾಹಿ, ಟಿಆರ್‍ಪಿಯಲ್ಲಿ ದಾಖಲೆಯನ್ನೇ ಬರೆದಿದೆ. 12 ಟಿವಿಆರ್ ಪಡೆದು ದಾಖಲೆ ಬರೆದಿರುವ ಜೊತೆ ಜೊತೆಯಲಿ, ಈ ವಾರ ಪಡೆದಿರುವ ಒಟ್ಟು ಜಿಆರ್‍ಪಿ 100. ಬಹುಶಃ ಕನ್ನಡ ಕಿರುತೆರೆ ಇತಿಹಾಸದಲ್ಲಿ ಯಾವುದೇ ಸೀರಿಯಲ್, ಒಂದೇ ವಾರಕ್ಕೆ ಇಷ್ಟು ಜಿಆರ್‍ಪಿ ಗಳಿಸಿದ ಉದಾಹರಣೆ ಇಲ್ಲ.

Ayushmanbhava Movie Gallery

Damayanthi Audio and Trailer Launch Gallery