` ನೋ ಲಾಸ್.. ನೋ ಪ್ರಾಫಿಟ್.. ಗೀತಾ ರಿಪೋರ್ಟ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
geetha movie producer talks about geetha box office collecion
Salam

ಗೀತಾ, ಗೋಕಾಕ್ ಚಳವಳಿ ಹಿನ್ನೆಲೆಯಲ್ಲಿ ಅರಳಿದ ಪ್ರೇಮಕಥೆಯ ಸಿನಿಮಾ. ಕಥೆ, ಚಿತ್ರಕಥೆ ವಿಭಿನ್ನವಾಗಿದ್ದ ಕಾರಣಕ್ಕೆ ಪ್ರೇಕ್ಷಕರು ಇಷ್ಟಪಟ್ಟ ಸಿನಿಮಾ. ಗಣೇಶ್,ಶಾನ್ವಿ ಜೋಡಿಯ ಚಿತ್ರಕ್ಕೆ ವಿಜಯ್ ನಾಗೇಂದ್ರ ನಿರ್ದೇಶಕರು. ಈಗ ಸಿನಿಮಾದ ಕಲೆಕ್ಷನ್ ರಿಪೋರ್ಟ್ ಕೊಟ್ಟಿದ್ದಾರೆ ನಿರ್ಮಾಪಕ ಸೈಯದ್ ಸಲಾಂ. ನೋ ಬಿಲ್ಡಪ್.. ನಥಿಂಗ್. ಇದ್ದದ್ದನ್ನು ಇದ್ದಂಗೆ ಹೇಳಿ ತಾವೇಕೆ ಡಿಫರೆಂಟ್ ಎಂದೂ ತೋರಿಸಿದ್ದಾರೆ.

ಗೀತಾ ಚಿತ್ರದಿಂದ ನಂಗೆ ಲಾಸ್ ಆಗಿಲ್ಲ. ಲಾಭವೂ ಬಂದಿಲ್ಲ. ಹಾಕಿದ್ದ ಖರ್ಚಿನಷ್ಟು ಗಳಿಕೆಯಾಗಿದೆ. ಅಲ್ಲಿಗಲ್ಲಿಗೆ ಸರಿ ಹೋಗಿದೆ ಎಂದಿದ್ದಾರೆ ಸೈಯದ್.

ನಟ ಗಣೇಶ್ ಮತ್ತು ನಿರ್ಮಾಪಕ ಸೈಯದ್ ಸಲಾಂ ಇಬ್ಬರದ್ದೂ ಒಂದೇ ಮಾತು, ಒಳ್ಳೆಯ ಚಿತ್ರ ಕೊಟ್ಟ ತೃಪ್ತಿ ಇದೆ. ಒಬ್ಬ ನಟನಾಗಿ ಇಂತಹ ಚಿತ್ರ ಕೊಟ್ಟಿದ್ದಕ್ಕೆ ನನಗಂತೂ ಹೆಮ್ಮೆಯಿದೆ. ಎಷ್ಟೋ ಬಾರಿ ಹಿಟ್ ಆದರೂ ಮನಸ್ಸಿಗೆ ತೃಪ್ತಿ ಇರಲ್ಲ. ಆದರೆ, ಗೀತಾ ಹಾಗಲ್ಲ, ಮನಸ್ಸಿಗೆ ಖುಷಿ ಕೊಟ್ಟ ಸಿನಿಮಾ ಎಂದಿದ್ದಾರೆ ಗಣೇಶ್.

ಮೊದಲ ವಾರ 5 ಕೋಟಿ ಬ್ಯುಸಿನೆಸ್ ಮಾಡಿದ್ದ ಗೀತಾ, ಈಗಲೂ ಮಲ್ಟಿಪ್ಲೆಕ್ಸ್‍ಗಳಲ್ಲಿ ಚೆನ್ನಾಗಿಯೇ ಹೋಗುತ್ತಿದೆ. ಚಿತ್ರವನ್ನು ಜನ ಮೆಚ್ಚಿಕೊಂಡಿದ್ದಾರೆ. ನಾನು ಹ್ಯಾಪಿ ಎಂದಿದ್ದಾರೆ ಸೈಯದ್ ಸಲಾಂ.

Amitab Bachchan Helps Film Workers On Labours Day

Food Kits Distribution To Media Personnel By Ministers Bc Patil Gallery