ಆಯುಷ್ಮಾನ್ ಭವ, ದ್ವಾರಕೀಶ್ ಬ್ಯಾನರಿನಲ್ಲಿ ಶಿವಣ್ಣ ನಟಿಸಿರುವ ಚಿತ್ರ. ಪಿ.ವಾಸು, ಶಿವಣ್ಣ ಜೋಡಿಗೆ ಇದು 2ನೇ ಸಿನಿಮಾ. ರಚಿತಾ ರಾಮ್ ನಾಯಕಿಯಾಗಿರುವ ಚಿತ್ರದಲ್ಲಿ ಅನಂತ್ ನಾಗ್, ಸುಹಾಸಿನಿ, ನಿಧಿ ಸುಬ್ಬಯ್ಯ ಮೊದಲಾದವರು ನಟಿಸಿರುವ ಚಿತ್ರ ನವೆಂಬರ್‍ನಲ್ಲಿ ರಿಲೀಸ್ ಆಗುತ್ತಿದೆ.
ಹಾಡುಗಳ ಲಿರಿಕಲ್ ವಿಡಿಯೋ ಬಿಟ್ಟಿರುವ ಚಿತ್ರತಂಡ ಈಗ ಟೀಸರ್ ಬಿಡುಗಡೆಗೆ ಮುಹೂರ್ತವಿಟ್ಟಿದೆ. ಅಕ್ಟೋಬರ್ 14 ರಂದು ಮಧ್ಯಾಹ್ನ 12 ಗಂಟೆಗೆ ಟೀಸರ್ ರಿಲೀಸ್ ಆಗಲಿದೆ. ಹೇಗಿರಲಿದೆ ಸಿನಿಮಾ..? ಮತ್ತೊಂದು ಸೈಕಲಾಜಿಕಲ್ ಥ್ರಿಲ್ಲರ್..? ವೇಯ್ಟ್ ಮಾಡಿ..