ಶಿವಣ್ಣ, ಪಿ.ವಾಸು, ದ್ವಾರಕೀಶ್ ಬ್ಯಾನರ್ ಕಾಂಬಿನೇಷನ್ನಿನ ಆಯುಷ್ಮಾನ್ ಭವ, ನವೆಂಬರ್ 1ಕ್ಕೆ ರಿಲೀಸ್ ಆಗುತ್ತಿದೆ. ರಿಲೀಸ್ ಡೇಟ್ ಹತ್ತಿರವಾಗುತ್ತಿದ್ದಂತೆ ಚಿತ್ರದ ಇಂಟ್ರೆಸ್ಟಿಂಗ್ ವಿಷಯಗಳೂ ಹೊರಬೀಳುತ್ತಿವೆ. ವಾಸು ಚಿತ್ರ ಎಂದ ಮೇಲೆ ಅಲ್ಲೊಂದು ಅದ್ಭುತ ಕಥೆ ಇರುತ್ತೆ ಎನ್ನುವುದರಲ್ಲಿ ಅನುಮಾನವಿಲ್ಲ. ಈ ಬಾರಿ ಕಥೆಯಷ್ಟೇ ಅಲ್ಲ, ಚಿತ್ರದಲ್ಲಿ ಅದ್ಭುತವಾದ ಗ್ರಾಫಿಕ್ಸ್ ಕೂಡಾ ಇದೆಯಂತೆ.
ಚಿತ್ರದ ಗ್ರಾಫಿಕ್ಸ್, ವಿಷ್ಯುಯಲ್ಸ್ ಎಫೆಕ್ಟ್‍ಗೆಂದೇ ಸುಮಾರು 2 ಕೋಟಿ ಖರ್ಚು ಮಾಡಿದ್ದಾರಂತೆ ನಿರ್ಮಾಪಕ ಯೋಗೀಶ್ ದ್ವಾರಕೀಶ್. ಹೆಚ್ಚೂ ಕಡಿಮೆ 1 ಗಂಟೆಯ ದೃಶ್ಯ ವೈಭವವನ್ನು ಗ್ರಾಫಿಕ್ಸಿನಿಂದಲೇ ಸಿಂಗರಿಸಿದ್ದಾರಂತೆ.
ಶಿವಣ್ಣ ಜೊತೆ ರಚಿತಾ ರಾಮ್ ಇದೇ ಮೊದಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದು, ಅನಂತ್‍ನಾಗ್, ನಿಧಿ ಸುಬ್ಬಯ್ಯ, ಸಾಧುಕೋಕಿಲ ಮೊದಲಾದವರು ನಟಿಸಿದ್ದಾರೆ. ಗುರುಕಿರಣ್ ಸಂಗೀತ ನಿರ್ದೇಶನದ 100ನೇ ಚಿತ್ರವಿದು.