ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಚಿತ್ರದ ಟೀಸರ್ ಹೊರಬಿದ್ದಿದ್ದೇ ತಡ, ಅಭಿಮಾನಿಗಳದ್ದೆಲ್ಲ... ಒಂದೇ ಪ್ರಶ್ನೆ. ರಿಲೀಸ್ ಯಾವಾಗ..? ಇಷ್ಟಕ್ಕೂ ರಿಲೀಸ್ ಮಾಡಬೇಕು ಅಂದ್ರೆ ಶೂಟಿಂಗ್ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಗಳೆಲ್ಲ ಮುಗಿಯಬೇಕಲ್ಲವೇ..? ಹಾಗಾದರೆ ಯುವರತ್ನ ಶೂಟಿಂಗ್ ಮುಗಿದಿದೆಯಾ..? ಈ ಪ್ರಶ್ನೆಗೆ ಒನ್ ವರ್ಡ್ ಉತ್ತರ : ಇಲ್ಲ.
ಯುವರತ್ನ ಚಿತ್ರಕ್ಕೆ ಇದುವರೆಗೆ ಸುಮಾರು 70 ದಿನಗಳ ಶೂಟಿಂಗ್ ಆಗಿದ್ದು, ಇನ್ನೂ 30ರಿಂದ 35 ದಿನಗಳ ಶೂಟಿಂಗ್ ಇದೆ. ಹಾಡುಗಳ ಚಿತ್ರೀಕರಣ, ಪುನೀತ್ ಮತ್ತು ಧನಂಜಯ್ ನಡುವಿನ ಫೈಟ್ ಸೀನ್ ಇನ್ನೂ ಶೂಟಿಂಗ್ ಆಗಿಲ್ಲ. ಕಲಾವಿದರ ದಂಡೇ ಚಿತ್ರದಲ್ಲಿದೆ. ಅವರೆಲ್ಲರ ಡೇಟ್ಸ್ ಪರಸ್ಪರ ಹೊಂದಿಸುವ ಸವಾಲೂ ಇದೆ. 3 ಕಾಲೇಜುಗಳಲ್ಲಿ ಶೂಟಿಂಗ್ ನಡೆಯುತ್ತಿದೆ. ಸ್ಸೋ.. ಸದ್ಯಕ್ಕೆ ಯುವರತ್ನ ರಿಲೀಸ್ ಇಲ್ಲ. ಸಿಂಪಲ್ಲಾಗ್ ಹೇಳ್ಬೇಕಂದ್ರೆ 2019ಕ್ಕೆ ಯುವರತ್ನ ರಿಲೀಸ್ ಆಗೋದು ಡೌಟ್.
ಸಂತೋಷ್ ಆನಂದ್ ರಾಮ್ ಈ ಬಗ್ಗೆ ಸ್ಪಷ್ಟ ಉತ್ತರವನ್ನೇನೂ ಕೊಟ್ಟಿಲ್ಲ. ಆದರೆ, ಚಿತ್ರದ ಕ್ವಾಲಿಟಿಯಲ್ಲಿ ರಾಜಿಯಾಗಲ್ಲ. ವೇಯ್ಟ್ ಎನ್ನುತ್ತಿದ್ದಾರೆ. ಕಾರ್ತಿಕ್ ಗೌಡ ಅವರು ಅಭಿಮಾನಿಗಳಿಗೆ ಹೇಳ್ತಿರೋದು ಇದನ್ನೇ. ಡೇಟ್ ನೀವು ಫಿಕ್ಸ್ ಮಾಡಬೇಡಿ, ನಾವೇ ಅನೌನ್ಸ್ ಮಾಡ್ತೇವೆ. ಪ್ಲೀಸ್ ವೇಯ್ಟ್ ಮಾಡಿ ಎನ್ನುತ್ತಿದ್ದಾರೆ. ವಿಜಯ್ ಕಿರಗಂದೂರು ನಿರ್ಮಾಣದಲ್ಲಿ ರೆಡಿಯಾಗುತ್ತಿರುವ ಯುವರತ್ನ ಟೀಸರ್ ಎಬ್ಬಿಸಿರುವುದು ಹವಾ ಅಲ್ಲ, ಬಿರುಗಾಳಿ.