ಶಿವರಾಜ್ ಕುಮಾರ್, ಪಿ.ವಾಸು, ದ್ವಾರಕೀಶ್ ಬ್ಯಾನರ್, ಗುರುಕಿರಣ್, ರಚಿತಾ ರಾಮ್, ಅನಂತ್ ನಾಗ್ ಕಾಂಬಿನೇಷನ್ನಿನ ಸಿನಿಮಾ ಆಯುಷ್ಮಾನ್ ಭವ. ವಿಶೇಷವೆಂದರೆ, ದ್ವಾರಕೀಶ್ ಚಿತ್ರಕ್ಕೆ 50 ವರ್ಷ ಪೂರೈಸಿರುವ ಹೊತ್ತಿನಲ್ಲಿ ಬಂದಿರುವ ಚಿತ್ರದ ಮೂಲಕವೇ ಗುರುಕಿರಣ್ ಸೆಂಚುರಿ ಬಾರಿಸುತ್ತಿದ್ದಾರೆ.
ಈಗ ಚಿತ್ರದ ಇನ್ನೊಂದು ಹಾಡಿನ ಲಿರಿಕಲ್ ವಿಡಿಯೋ ರಿಲೀಸ್ ಆಗಿದೆ. ಸರ ಸರ..ಸರ ಧುಮುಕೊ ನೀರಿಗೆ.. ಗರಿಗೆದರುತ ಹಾರೋ ಹಕ್ಕಿಗೆ.. ಎಂಬ ಹಾಡಿದು. ಈಗಾಗಲೇ ಆಯುಷ್ಮಾನ್ ಭವ ಚಿತ್ರದ ಕೃಷ್ಣಾ ನೀ ಬೇಗನೆ ಬಾರೋ.. ಮತ್ತು ಥಕಿಟ ಥಕಿಟ ಹಾಡುಗಳ ಲಿರಿಕಲ್ ವಿಡಿಯೋ ಹೊರಬಿದ್ದಿವೆ.
ವಿಶೇಷವೆಂದರೆ ತಮ್ಮ 100ನೇ ಚಿತ್ರದಲ್ಲಿ ಗುರುಕಿರಣ್ ಬಳಸಿರುವ ಮ್ಯೂಸಿಕ್. ಇದುವರೆಗೆ ಗುರುಕಿರಣ್ ಚಿತ್ರದಲ್ಲಿ ಕಾಣಿಸದೇ ಇರುವ ಹೊಸತನದ ಸ್ಪರ್ಶ ಆಯುಷ್ಮಾನ್ ಭವ ಚಿತ್ರದ ಹಾಡುಗಳಲ್ಲಿದೆ. ಕನ್ನಡದ ಹಳೆಯ ಸಂಗೀತ ಮಾಂತ್ರಿಕರನ್ನು ನೆನಪಿಸಿಕೊಂಡೇ 100ನೇ ಚಿತ್ರಕ್ಕೆ ಮ್ಯೂಸಿಕ್ ಕೊಟ್ಟ ಹಾಗಿದೆ ಗುರುಕಿರಣ್. ಗುನುಗುವ ಹಾಡುಗಳು.