` ತಮಿಳಿಗೆ ಸೂರ್ಯವಂಶಿಯಾಗಿ ಹೊರಟ ಯಶ್ - chitraloka.com | Kannada Movie News, Reviews | Image

User Rating: 5 / 5

Star activeStar activeStar activeStar activeStar active
 
yash enters kollywood
Yash

ರಾಕಿಂಗ್ ಸ್ಟಾರ್ ಯಶ್ ತಮಿಳಿಗೆ ಹೊರಟು ನಿಂತಿದ್ದಾರೆ. ಸೂರ್ಯವಂಶಿಯಾಗಿ. ಅರೆ.. ಯಾವುದಾದರೂ ತಮಿಳು ಸಿನಿಮಾ ಒಪ್ಪಿಕೊಂಡ್ರಾ..? ಇಂತಹ ಪ್ರಶ್ನೆಗಳನ್ನೆಲ್ಲ ಸೈಡಿಗಿಡಿ. ಕೆಜಿಎಫ್-2ನಲ್ಲಿ ಬ್ಯುಸಿಯಾಗಿರುವ ಯಶ್, ಯಾವ ಮತ್ತೊಂದು ಸಿನಿಮಾವನ್ನೂ ಓಕೆ ಮಾಡಿಲ್ಲ. ಆದರೆ, ತಮಿಳಿಗೆ ಸೂರ್ಯವಂಶಿಯಾಗಿ ಹೊರಟಿರುವುದಂತೂ ಸತ್ಯ.

ಅದು ಹೊಸ ಸಿನಿಮಾ ಏನೂ ಅಲ್ಲ. ಯಶ್, ರಾಧಿಕಾ ಪಂಡಿತ್ ಒಟ್ಟಾಗಿ ಅಭಿನಯಿಸಿದ್ದ, ಮಹೇಶ್ ರಾವ್ ನಿರ್ದೇಶನದ ಚಿತ್ರ ಸಂತು ಸ್ಟ್ರೈಟ್ ಫಾರ್ವರ್ಡ್ ಚಿತ್ರದ ತಮಿಳು ವರ್ಷನ್. ಅದು ತಮಿಳಿನಲ್ಲಿ ಸೂರ್ಯವಂಶಿ ಅನ್ನೋ ಹೆಸರಲ್ಲಿ ರಿಲೀಸ್ ಆಗುತ್ತಿದೆ. ವಿಶೇಷ ಅಂದ್ರೆ, ಇದು ತಮಿಳಿನಿಂದಲೇ ಕನ್ನಡಕ್ಕೆ ರೀಮೇಕ್ ಆಗಿದ್ದ ಸಿನಿಮಾ.

 

Shivarjun Movie Gallery

KFCC 75Years Celebrations and Logo Launch Gallery